ಪಶ್ಚಿಮ ಬಂಗಾಳ, ಒಡಿಶಾದಲ್ಲಿ ವಿನಾಶಕಾರಿ ಅಂಫಾನ್ ಆತಂಕ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಕೊಲ್ಕತಾ/ಭುವನೇಶ್ವರ, ಮೇ 19- ಅಂಫಾನ್ (ಉಮ್‍ಪನ್) ಚಂಡಮಾರುತ ಸೂಪರ್‍ಸೈಕ್ಲೋನ್ ಆಗಿ ಮಾರ್ಪಟ್ಟಿದ್ದು, ಇಂದು ಅಪರಾಹ್ನ ಅಥವಾ ಸಂಜೆ ಬಂಗಾಳ ಕೊಲ್ಲಿ ಮೇಲೆ ಅಪ್ಪಳಿಸಿದೆ.

ಬೇ ಆಫ್ ಬೆಂಗಾಲ್‍ನ ಕರಾವಳಿ ಪ್ರದೇಶಗಳಲ್ಲಿ ರಭಸದ ಬಿರುಗಾಳಿಯಿಂದ ಕೂಡಿದ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.

ಬಂಗ್ಲಾದೇಶ, ಪಶ್ಚಿಮ ಬಂಗಾಳ ಮತ್ತುಒಡಿಶಾದಲ್ಲಿ ಸೂಪರ್ ಸೈಕ್ಲೋನ್‍ಚಂಡಮಾರುತದ ಪ್ರಭಾವ ಭಾರಿ ಬಿರುಸಾಗಿರಲಿದೆ. ಅಂಫಾನ್ ಸಮುದ್ರ ಸುಂಟರಗಾಳ ಅಪ್ಪಸಿದ ನಂತರ ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಹಾನಿ ಸಂಭವಿಸುವ ಸಾಧ್ಯತೆಇದೆಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಕಳೆದ ಎರಡು ದಶಕಗಳಲ್ಲಿ ಬಂಗಾಳಕೊಲ್ಲಿ ಮೇಲೆ ಅಪ್ಪಳಿಸುತ್ತಿರುವ ಎರಡನೇ ಸೂಪರ್ ಸೈಕ್ಲೋನ್ ಇದಾಗಿದ್ದು, ಎದುರಾಗಬಹುದಾದ ಪ್ರಕೃತಿ ವಿಕೋಪವನ್ನು ನಿಗ್ರಹಿಸಲು ಕೇಂದ್ರ ಮತ್ತು ರಾಜ್ಯಗಳು ವಿಪತ್ತು ನಿರ್ವಹಣಾ ಪಡೆಗಳು ಸಮರೋಪಾದಿಯಲ್ಲಿ ಸಜ್ಜಾಗಿವೆ.

ದೇಶಾದ್ಯಂತ ವ್ಯಾಪಕ ಸಾವು ಮತ್ತು ಸೋಂಕಿಗೆ ಕಾರಣವಾಗಿರುವ ಕಿಲ್ಲರ್ ಕೊರೊನಾ ಹಾವಳಿ ತೀವ್ರವಾಗಿರುವಾಗಲೇ ಕೆಲವು ರಾಜ್ಯಗಳ ಮೇಲೆ ವಿನಾಶಕಾರಿ ಚಂಡಮಾರುತ ದಾಳಿಯ ಆತಂಕವೂ ಎದುರಾಗಿದೆ.

ಈಗಾಗಲೇ ಪಶ್ಚಿಮ ಬಂಗಾಳ ಮತು ್ತಒಡಿಶಾದಲ್ಲಿ ಕೊರೊನಾ ದಾಳಿಯಿಂದ ಸಾವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗಿರುವಾಗಲೇ ಸೂಪರ್ ಸೈಕ್ಲೋನ್‍ಗಾಯದ ಮೇಲೆ ಬರೆ ಎಳೆಯುವ ಆತಂಕ ಸೃಷ್ಟಿಸಿದೆ.

ಅಂಫಾನ್ ಹೆಸರಿನ ಚಂಡಮಾರುತ ಇಂದು ಸಂಜೆ ಬಂಗಾಳ ಕೊಲ್ಲಿ ಮತ್ತು ಸುತ್ತ ಮುತ್ತಲ ಪ್ರದೇಶಗಳ ಮೇಲೆ ಅಪ್ಪಳಿಸಿದ್ದು, ಸೂಪರ್ ಸೈಕ್ಲೋನ್‍ಗಂಡಾಂತರ ನಿಭಾಯಿಸಲು ಸಕಲ ರೀತಿಯಲ್ಲಿ ರಾಜ್ಯಗಳು ಸಜ್ಜಾಗಿವೆ.

ಸಮುದ್ರದಲ್ಲಿ ಭಾರೀ ಅಲೆಗಳು ಏಳಲಿದ್ದು, ಚಂಡಮಾರುತದ ತೀವ್ರತೆ ಮೂರು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ. ಇಂದು ಸಂಜೆಯ ವೇಳೆಗೆ ಚಂಡಮಾರುತದ ವೇಗ ತೀವ್ರಗೊಂಡು ದೇಶದ ಪೂರ್ವ ಭಾಗದಲ್ಲಿ ಭಾರೀ ಮಳೆಯಾಗಲಿದೆ.

ಸಂಜೆ ಬಳಿಕ ದಿಕ್ಕು ಬಲಿಸುವ ಅಂಫಾನ್‍ನಿಂದ ಕರಾವಳಿ ಪ್ರದೇಶಗಳಲ್ಲಿ ಭಾರೀ ಬಿರುಗಾಳಿ ಸಹಿತ ವರ್ಷಧಾರೆಯಾಗಲಿದೆ. ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿ ಪ್ರದೇಶಗಳಲ್ಲಿ ತೀವ್ರವಾಗಿರಲಿದ್ದು, ಪ್ರಬಲ ಮಾರುತಗಳೊಂದಿಗ ಭಾರೀ ಮಳೆಯಾಗಲಿದೆ.

ಇನ್ನು ಕೆಲವು ರಾಜ್ಯಗಳು ಮತ್ತು ಯುಟಿಗಳಲ್ಲಿ ಇದು ವಾಯುಭಾರ ಕುಸಿತಕ್ಕೆ ಕಾರಣವಾಗಿ ಮಳೆಯಾಗಲಿದೆ ಎಂದುಐಎಂಡಿ ಮುನ್ಸೂಚನೆ ನೀಡಿದೆ.ಮೀನುಗಾರರುಯಾವುದೇ ಕಾರಣಕ್ಕೂ ಸಮುದ್ರಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ತಗ್ಗು ಪ್ರದೇಶಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಿಳಿಸಲಾಗಿದೆ.

# ನೆರವಿನ ಅಭಯ :
ಈ ಮಧ್ಯೆಕೇಂದ್ರ ಗೃಹ ಸಚಿವಅಮಿತ್ ಶಾ ಇಂದು ಬೆಳಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತುಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‍ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.

ಚಂಡಮಾರುತದಿಂದಎದುರಾಗುವಯಾವುದೇ ಪರಿಸ್ಥಿತಿ ನಿಭಾಯಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರಅಗತ್ಯವಾದಎಲ್ಲ ನೆರವು ನೀಡಲಿದೆಎಂದು ಭರವಸೆ ನೀಡಿದ್ದಾರೆ.

Facebook Comments

Sri Raghav

Admin