ನ್ಯಾಯಾಧೀಶರ ವಿರುದ್ಧ ಷಡ್ಯಂತ್ರ : ಸುಪ್ರೀಂ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಆ.6- ನ್ಯಾಯಾಧೀಶರ ಸಾವಿನ ಪ್ರಕರಣದ ತನಿಖೆಯಲ್ಲಿ ಸಿಬಿಐ ಯಾವುದೇ ಕ್ರಮ ತೆಗೆದುಕೊಂಡಿದಲ್ಲ ಎಂದು ಆಕ್ಷೇಪಿಸಿರುವ ಸುಪ್ರೀಂಕೋರ್ಟ್ ನ್ಯಾಯಾಧೀಶರ ವಿರುದ್ಧ ನಡೆಯುತ್ತಿರುವ ಹೊಸ ರೀತಿಯ ಷಡ್ಯಂತ್ರಗಳ ವಿರುದ್ದ ಅಸಮದಾನ ವ್ಯಕ್ತಪಡಿಸಿದ್ದಾರೆ.

ಜಾರ್ಖಾಂಡ್‍ನ ಹೆಚ್ಚುವರಿ ಜಿಲ್ಲಾ ನ್ಯಾಯಾೀಶರಾದ ಉತ್ತಮ್ ಆನಂದ್ ಅವರ ಹತ್ಯೆ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ಸೂರ್ಯಕಾಂತ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಸಿಬಿಐ ತನ್ನ ಮನೋಧರ್ಮವನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದೆ.

ಇತ್ತೀಚೆಗೆ ದೇಶದಲ್ಲಿ ಹೊಸ ಸಂಪ್ರದಾಯ ಆರಂಭವಾಗಿದೆ. ಯಾವುದಾದರೂ ನ್ಯಾಯಾೀಶರು ತಮಗೆ ವಿರುದ್ಧವಾದ ತೀರ್ಪು ನೀಡಿದರೆ ಅವರ ವಿರುದ್ಧ ಅಪಪ್ರಚಾರ ಮಾಡುವುದು, ಬೆದರಿಕೆ ಹಾಕುವುದು ನಡೆಯುತ್ತಿದೆ.

ಉತ್ತಮ್ ಆನಂದ್ ಪ್ರಕರಣದಲ್ಲಿ ಮೊದಲು ಅವರಿಗೆ ಬೆದರಿಕೆ ಹಾಕಲಾಗಿತ್ತು. ಬಳಿಕ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ನಡೆಸಲಾಯಿತು. ಬಳಿಕ ಕೊಲೆ ಮಾಡಲಾಗಿದೆ ಎಂದು ನ್ಯಾಯಾೀಶರು ಅಸಮದಾನ ವ್ಯಕ್ತ ಪಡಿಸಿದ್ದಾರೆ.

ತನಿಖೆ ನಡೆಸುತ್ತಿರುವ ಸಿಬಿಐ ಏನನ್ನೂ ಮಾಡಿಲ್ಲ. ಇದು ಸರ್ವತಾ ಒಪ್ಪತಕ್ಕ ವಿಷಯವಲ್ಲ. ಮೊದಲು ನಿಮ್ಮ ಮನೋಧರ್ಮವನ್ನು ಬದಲಾವಣೆ ಮಾಡಿಕೊಳ್ಳಿ. ಉತ್ತಮ್ ಆನಂದ್ ಅವರಿಗೆ ಬೆದರಿಕೆ ಹಾಕಿದವರು, ಅವರ ವಿರುದ್ಧ ಅಪಪ್ರಚಾರ ಮಾಡಿದವರು ಬಗ್ಗೆ ಮಾಹಿತಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಜಾರ್ಖಾಂಡ್ ರಾಜ್ಯ ಸರ್ಕಾರ ಮೊದಲು ಹತ್ಯೆ ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ ರಚನೆ ಮಾಡಿತ್ತು. ಬಳಿಕ ಸಿಬಿಐಗೆ ಹಸ್ತಾಂತರಿಸಿದೆ ಎಂದು ಜಾರ್ಖಾಂಡ್‍ನ ಅಡ್ವೋಕೆಟ್ ಜನರಲ್ ಹೇಳಿದಾಗ, ಸಿಬಿಐಗೆ ಒಪ್ಪಿಸುವ ಮೂಲಕ ನೀವು ಕೈ ತೊಳೆದುಕೊಂಡು ಬಿಟ್ರಲ್ಲ ಎಂದು ಆಕ್ಷೇಪಿಸಿದೆ.

Facebook Comments

Sri Raghav

Admin