ನಾಲ್ವರು ಸುಪ್ರೀಂ ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.23- ಸುಪ್ರೀಂ ಕೋರ್ಟ್‍ನ ಹೊಸ ನ್ಯಾಯಮೂರ್ತಿಗಳಾಗಿ ನಾಲ್ವರು ನ್ಯಾಯಾಧೀಶರು ಇಂದು ಪ್ರಮಾಣ ವಚನ ಸ್ವೀಕರಿಸಿದರು.ಇದರೊಂದಿಗೆ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಗಳ ಸಂಖ್ಯೆ ಬಲ 34ಕ್ಕೆ ಏರಿದೆ. ಕೋರ್ಟ್ ರೂಮ್‍ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ, ಎಸ್.ರವೀಂದ್ರ ಭಟ್, ರಾಮ ಸುಬ್ರಮಣಿಯನ್ ಹಾಗೂ ಹೃಷಿಕೇಶ್ ರಾಯ್ ಅವರಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಮುರಾರಿ, ಭಟ್, ಸುಬ್ರಮಣಿ ಯನ್ ಮತ್ತು ರಾಯ್ ಅವರುಗಳು ಅನುಕ್ರಮವಾಗಿ ಪಂಜಾಬ್ ಮತ್ತು ಹರಿಯಾಣ, ರಾಜಸ್ತಾನ , ಹಿಮಾಚಲ ಪ್ರದೇಶ ಹಾಗೂ ಕೇರಳ ಹೈಕೋರ್ಟ್‍ನ ಮುಖ್ಯ ನ್ಯಾಯಾಧೀಶರಾಗಿದ್ದರು.

ಈ ನಾಲ್ವರು ನೂತನ ನ್ಯಾಯ ಮೂರ್ತಿಗಳ ಸೇರ್ಪಡೆ ಯೊಂದಿಗೆ ಸುಪ್ರೀಂಗೆ ಮಂಜೂರಾದ 34 ನ್ಯಾಯಾಧೀಶರ ಸಂಖ್ಯಾ ಬಲ ಪೂರ್ಣಗೊಂಡಂತಾಗಿದೆ. ಕಳೆದ ಬುಧವಾರ ಈ ನಾಲ್ವರು ಹೊಸ ನ್ಯಾಯಾಧೀಶರ ನೇಮಕಕ್ಕೆ ಅನುಮೋದನೆ ನೀಡಲಾಗಿತ್ತು.

Facebook Comments