ವಾರಣಾಸಿಯ ಜ್ಞಾನವಾಪಿ ಮಸೀದಿ ವಿಡಿಯೋ ಗ್ರಫಿಗೆ ಸುಪ್ರೀಂ ಸಮ್ಮತಿ..

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೋ, ನವದೆಹಲ್ಲಿ.ಮೇ.13- ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ವಿಡಿಯೋಗ್ರಫಿ ನಾಳೆ ಪುನರಾರಂಭಗೊಳ್ಳಲಿದೆ ಎಂದು ಜಿಲ್ಲಾಡಳಿತ ಇಂದು ಪ್ರಕಟಿಸಿದೆ. ಮಸೀದಿಯ ಹಿಂಭಾಗದಲ್ಲಿರುವ ಹಿಂದೂ ದೇಗುಲಕ್ಕೆ ವರ್ಷಪೂರ್ತಿ ಪ್ರವೇಶ ಕೋರಿ ಮಹಿಳೆಯರ ಗುಂಪಿನ ಒತ್ತಾಯ  ವಿಷಯವು ಸುಪ್ರೀಂ ಕೋರ್ಟ್ ಅಂಗಳ ತಲುಪಿದೆ.

ಈ ವಿಚಾರದಲ್ಲಿ ಯಥಾಸ್ಥಿತಿಗೆ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ ಆದರೆ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿಯಲ್ಲಿ ನಡೆಯುತ್ತಿರುವ ವೀಡಿಯೊಗ್ರಫಿಯನ್ನು ಪ್ರಶ್ನಿಸುವ ಅರ್ಜಿಯನ್ನು ತುರ್ತಾಗಿ ವಿಚಾರಣೆ ಮಾಡಲು ಸಮ್ಮತಿಸಿದೆ.

ಮುಖ್ಯ ನ್ಯಾಯಮೂರ್ತಿ ರಮಣ ಅವರ ನೇತೃತ್ವದ ನ್ಯಾಯಪೀಠ ಅಯಥಾಸ್ಥಿತಿಗೆ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿ,ದಾಖಲೆಗಳನ್ನು ಪರಿಶೀಲಿಸದೆ ಅಂತಹ ಆದೇಶವನ್ನು ಸಾಧ್ಯವಿಲ್ಲ ಎಂದು ಹೇಳಿದೆ ಐವರು ಹಿಂದೂ ಮಹಿಳೆಯರು ಮಸೀದಿಯ ಹಿಂಭಾಗದಲ್ಲಿರುವ ದೇಗುಲದಲ್ಲಿ ಪ್ರಾರ್ಥನೆ ಮಾಡಲು ವರ್ಷಪೂರ್ತಿ ಪ್ರವೇಶ ಕೋರಿದ್ದಾರೆ.

ಈ ಪ್ರದೇಶದಲ್ಲಿ ಪ್ರಸ್ತುತ ವರ್ಷಕ್ಕೊಮ್ಮೆ ಪ್ರಾರ್ಥನೆಗಾಗಿ ತೆರೆದಿರುತ್ತದೆ. ಮಹಿಳೆಯರು ಹಳೆಯ ದೇವಾಲಯದ ಸಂಕೀರ್ಣದಲ್ಲಿ ಇತರ ಗೋಚರ ಮತ್ತು ಅದೃಶ್ಯ ದೇವತೆಗಳಿಗೆ ಪ್ರಾರ್ಥಿಸಲು ಅನುಮತಿಯನ್ನು ಬಯಸುತ್ತಾರೆ.

ಪ್ರಕರಣದ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ ಅರ್ಜಿದಾರರು ಕೇಳಿದ ಎಲ್ಲಾ ಸ್ಥಳಗಳಲ್ಲಿ ವಿಡಿಯೋಗ್ರಫಿ ಮಾಡಬಹುದು ಎಂದು ಹೇಳಿದೆ. ಮೇ 17ರೊಳಗೆ ಸರ್ವೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತುನಂತರ ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ಸಮೀಕ್ಷೆ ಸ್ಥಗಿತಗೊಂಡಿದೆ. ಮಸೀದಿಯೊಳಗೆ ವೀಡಿಯೋ ತೆಗೆಯಲು ಕೋರ್ಟ್ ಆದೇಶ ನೀಡಿಲ್ಲ ಎಂದು ಮಸೀದಿ ಸಮಿತಿ ಹೇಳಿದೆ. ಆದರೆ, ಅರ್ಜಿದಾರರ ಪರ ವಕೀಲರು, ನ್ಯಾಯಾಲಯವು ಅನುಮತಿ ನೀಡಿದೆ ಎಂದು ಒತ್ತಾಯಿಸಿದರು.

Facebook Comments