ಕೊರೋನಾ ಪರಿಹಾರ ನೀಡದ ರಾಜ್ಯಗಳಿಗೆ ಚಾಟಿ ಬೀಸಿದ ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜ.19- ಕೋವಿಡ್-19ನಿಂದ ಮೃತಪಟ್ಟವರ ಕುಟುಂಬದವರಿಗೆ ಪರಿಹಾರ ನೀಡಲು ವಿಫಲವಾದ ರಾಜ್ಯ ಸರ್ಕಾರಗಳನ್ನು ಸುಪ್ರೀಂಕೋರ್ಟ್ ಇಂದು ತರಾಟೆಗೆ ತೆಗೆದುಕೊಡಿದೆ.

ಈ ಕುರಿತಂತೆ ಆಂಧ್ರಪ್ರದೇಶ ಮುಖ್ಯ ಕಾರ್ಯದರ್ಶಿಗೆ ಕಾರಣ ಕೇಳಿ (ಷೋ ಕಾಸ್) ನೋಟೀಸ್ ನೀಡಿರುವ ಸರ್ವೋನ್ನತ ನ್ಯಾಯಾಲಯವು ಅವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನೇಕೆ ಕೈಗೊಳ್ಳಬಾರದು ಎಂದು ಪ್ರಶ್ನಿಸಿದೆ.

ತತ್ಸಂಬಂತ ರಾಜ್ಯಗಳಲ್ಲಿ ಕೋವಿಡ್-19ರ ಸಂತ್ರಸ್ತ ಕುಟುಂಬಗಳಿಗೆ 50,000 ರೂ.ಗಳ ತಾತ್ಕಾಲಿಕ ಪರಿಹಾರ ಧನವನ್ನು ನೀಡದೆ ಕಡಿಮೆ ಮೊತ್ತ ವಿತರಿಸಿರುವುದೇಕೆ ಎಂಬುದನ್ನು ವಿವರಿಸಬೇಕು. ಇದಕ್ಕಾಗಿ ಆಂಧ್ರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಇಂದು ಮಧ್ಯಾಹ್ನ 2 ಗಂಟೆಗೆ ತನ್ನ ಮುಂದೆ ವಚ್ರ್ಯುವಲ್ ಆಗಿ ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ನ್ಯಾಯಮೂರ್ತಿಗಳಾದ ಎಂ.ಆರ್. ಷಾ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠವು ಇಂದು ಮಧ್ಯಾಹ್ನ 2 ಗಂಟೆಗೆ ಆದೇಶ ನೀಡುವುದಾಗಿ ಮತ್ತು ರಾಜ್ಯ ಕಾನೂನು ಸೇವಾ ಪ್ರಾಕಾರಗಳು ಕೋವಿಡ್-19 ರಿಂದ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗೆ 2001ರ ಗುಜರಾತ್ ಭೂಕಂಪದ ಸಂದರ್ಭದಲ್ಲಿ ಮಾಡಿದಂತೆ ನೋಂದಣಿ ಮತ್ತು ಪರಿಹಾರ ವಿತರಣೆ ಮಾಡಬೇಕು ಎಂದು ಸೂಚನೆ ನೀಡಿದೆ.

ಬಿಹಾರ ನೀಡಿರುವ ಕೋವಿಡ್‍ನಿಂದ ಮೃತಪಟ್ಟವರ ಸಂಖ್ಯೆಯನ್ನು ತಿರಸ್ಕರಿಸಿರುವ ಸುಪ್ರೀಂಕೋರ್ಟ್ ಇವೆಲ್ಲವೂ ವಾಸ್ತವಿಕ ಅಂಕಿ-ಅಂಶಗಳಲ್ಲ, ಆದರೆ ಸರ್ಕಾರದ ಅಂಕಿ-ಅಂಶಗಳು ಎಂದು ಹೇಳಿದೆ.

Facebook Comments

Sri Raghav

Admin