‘ತುಳು ನಟ ಸುರೇಂದ್ರ ಬಂಟ್ವಾಳ್‍ನನ್ನು ಕೊಲೆ ಮಾಡಿದ್ದು ನಾನೇ’

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು,ಅ.22- ತುಳು ನಟ ಸುರೇಂದ್ರ ಬಂಟ್ವಾಳ್ ಹತ್ಯೆಯನ್ನು ತಾನೇ ಮಾಡಿದ್ದಾಗಿ ಸತೀಶ್ ಕುಲಾಲ್ ಎಂಬಾತ ಪೊಲೀಸರಿಗೆ ತಿಳಿಸಿದ್ದಾನೆ. ಆಡಿಯೋ ಮೂಲಕ ಸತೀಶ್ ಕುಲಾಲ್ ಅಪಾರ್ಟ್‍ಮೆಂಟ್‍ನಲ್ಲಿ ಸುರೇಂದ್ರ ಬಂಟ್ವಾಳ್‍ನನ್ನು ಕೊಲೆ ಮಾಡಿದ್ದು ನಾನೇ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಹತ್ಯೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

ಇತ್ತೀಚೆಗೆ ನಡೆದ ಕಿಶನ್ ಹೆಗಡೆ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ಮಾಡಿದ್ದೇನೆ. ಕಿಶನ್ ಹೆಗಡೆ ಕೊಲೆ ಮಾಡಲು ನಟ ಸುರೇಂದ್ರ ಬಂಟ್ವಾಳ್ ಹಣ ಸಹಾಯ ಮಾಡಿದ್ದ. ಈ ವಿಚಾರವಾಗಿ ನಮ್ಮಿಬ್ಬರ ನಡುವೆ ಜಗಳ ಸಹ ನಡೆದಿತ್ತು. ಇದರಿಂದ ನಾನು ಕುಪಿತಗೊಂಡಿದ್ದೆ ಎಂದಿದ್ದಾನೆ.

ಕಳೆದ 22 ವರ್ಷಗಳಿಂದ ನಾನು ಸುರೇಂದ್ರನೊಂದಿಗೆ ಇದ್ದೆ. ಅವರನ ಎಲ್ಲಾ ವ್ಯವಹಾರ ಗೊತ್ತಿತ್ತು. ಆತ ಬಡ್ಡಿ ವ್ಯವಹಾರ ನಡೆಸುತ್ತಿದ್ದ. ಅದು ಪಾಪದ ಹಣ. ಇದೆಲ್ಲದರ ಹಿನ್ನೆಲೆಯಲ್ಲಿ ನಾನು ನಟ ಸುರೇಂದ್ರನನ್ನು ಕೊಲೆ ಮಾಡಿದ್ದೇನೆ ಎಂದು ಸತೀಶ್ ಕುಲಾಲ್ ಆಡಿಯೋ ಮೂಲಕ ಒಪ್ಪಿಕೊಂಡಿದ್ದಾನೆ. ನಿನ್ನೆ ಅಪಾರ್ಟ್‍ಮೆಂಟ್‍ವೊಂದರಲ್ಲಿ ನಟ ಸುರೇಂದ್ರನ ಕೊಲೆಯಾಗಿತ್ತು.

Facebook Comments