ಮಕ್ಕಳೊಂದಿಗೆ ಬೆರೆತ ಶಿಕ್ಷಣ ಸಚಿವರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.4- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಇಂದು ಬೆಳಗ್ಗೆ ಮಾಗಡಿ ತಾಲ್ಲೂಕಿನ ವಿವಿಧ ವಿದ್ಯಾಗಮ ಕಲಿಕಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕಲ್ಲೂರು, ವರದೇನಹಳ್ಳಿ, ಬಾಚೇನಹಳ್ಳಿ, ತಗಚುಗುಪ್ಪೆ, ಬಂಟರಕುಪ್ಪೆ ಕಾಲೋನಿ, ಬಂಟರಕುಪ್ಪೆ, ಬೆಳಗುಂಬ ಮತ್ತು ಮಾಗಡಿ ಈ ಸ್ಥಳಗಳ ಆಯ್ದೆಡೆ ನಡೆಯುತ್ತಿರುವ ವಿದ್ಯಾಗಮ ಕಲಿಕಾ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಮಕ್ಕಳ ಕಲಿಕೆಯನ್ನು ಪರಾಮರ್ಶಿಸಿದರು.

ಮಕ್ಕಳೊಂದಿಗೆ ಕಲೆತು ಮಾತನಾಡಿದೆ. ಅವರೇನು ಕಲಿಯುತ್ತಿದ್ದಾರೆಂದು ವಿಚಾರಿಸಿದೆ. ಕೆಲ ಪ್ರಶ್ನೆಗಳನ್ನು ಸಹ ಕೇಳಿದೆ. ಕೊರೊನಾ ಕುರಿತು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ಅವರಲ್ಲಿನ ಮಾಹಿತಿ ಪರೀಕ್ಷಿಸಿದೆ.

ಎಲ್ಲಾ ಮಕ್ಕಳು ಮಾಸ್ಕ್ ಧರಿಸಿದ್ದು, ಶಾರೀರಿಕ ಅಂತರ ಕಾಪಾಡಿಕೊಂಡಿದ್ದು ಗಮನಾರ್ಹ. ಮಕ್ಕಳೆಲ್ಲ ಖುಷಿಯಾಗಿ ಇದ್ದದ್ದನ್ನು ಕಂಡು ಸಂತಸವಾಯಿತು ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Facebook Comments