ಗುಣಾತ್ಮಕ ಶಿಕ್ಷಣಕ್ಕೆ ಮಹತ್ವ ಕೊಡಲು ಸಚಿವ ಸುರೇಶ್‍ಕುಮಾರ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.12- ವಿದ್ಯಾರ್ಥಿ ಗಳಲ್ಲಿರುವ ಕೊರತೆ ನೀಗಿಸಲು ಹಾಗೂ ಗುಣಾತ್ಮಕ ಶಿಕ್ಷಣಕ್ಕೆ ಮಹತ್ವ ಕೊಡಲು ಸೂಚನೆ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಇಂದಿಲ್ಲಿ ತಿಳಿಸಿದರು.

ಜಿಲ್ಲಾ ಮಟ್ಟದ ಡಿಎಸ್‍ಇಆರ್‍ಟಿ ಪ್ರಾಂಶುಪಾಲರೊಂದಿಗೆ ಸಂವಾದ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರನೇ ತರಗತಿ ನಂತರ ಮಕ್ಕಳ ಕಲಿಕೆಯ ಆಸಕ್ತಿ ಕಡಿಮೆಯಾಗುತ್ತಿದೆ.

ಮಕ್ಕಳಲ್ಲಿರುವ ಕೊರತೆಯನ್ನು ನೀಗಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಗಳು, ಶಿಕ್ಷಣ ಮಹಾವಿದ್ಯಾಲಯಗಳ(ಸಿಟಿಇ) ಮೂಲಕ ಬಿಆರ್‍ಪಿ ಮತ್ತು ಡಿಆರ್‍ಪಿ ಸಜ್ಜುಗೊಳಿಸಲು ರೂಪಿಸಲಾಗಿದೆ. ಗಣಿತ, ಇಂಗ್ಲೀಷ್, ವಿಜ್ಞಾನ ಭಾಷೆ ಕಲಿಕೆಯಲ್ಲಿ ಮಕ್ಕಳು ಹಿಂದುಳಿದಿರುವುದು ಕಂಡುಬಂದಿದೆ. ಅಲ್ಲದೆ, ಭಾಷಾ ಕಲಿಕೆಯಲ್ಲೂ ಸಮಸ್ಯೆ ಇದೆ. ಇವನ್ನು ನೀಗಿಸಲು ವಿಷಯ ಇನ್ಸ್‍ಪೆಕ್ಟರ್‍ಗಳಿಗೆ ವಿಶೇಷ ತರಬೇತಿ ನೀಡಿ ಶಾಲೆಯಲ್ಲಿನ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ರೂಪಿಸಲಾಗುತ್ತದೆ ಎಂದರು.

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಸಂಜೆ ಮತ್ತು ಬೆಳಗ್ಗೆ ವಿಶೇಷ ತರಗತಿ ನಡೆಸಲಾಗುತ್ತಿದ್ದು, ಇದನ್ನು ಸಾಧ್ಯವಾದಷ್ಟು ಆರಂಭಿಕ ಹಂತದಲ್ಲಿ ಪ್ರಾರಂಭಿಸಲು ಸೂಚಿಸಲಾಗಿದೆ. ಪ್ರತಿ ತರಗತಿಯಲ್ಲೂ ನಿರ್ದಿಷ್ಟ ಸಮಸ್ಯೆಗಳನ್ನು ಹಾಗೂ ಯಾವ ವಿಷಯದಲ್ಲಿ ವಿದ್ಯಾರ್ಥಿಗಳ ಕಲಿಕೆಯ ಕೊರತೆ ಕಂಡುಬರುತ್ತದೆ ಎಂದು ಗಮನಹರಿಸಿ ಅದನ್ನು ಪರಿಹರಿಸಲು ತಿಳಿಸಲಾಗಿದೆ ಎಂದು ಹೇಳಿದರು.

Facebook Comments