ಎಸ್ಸೆಸ್ಸೆಲ್ಸಿ ಫಲಿತಾಂಶ ಯಾವಾಗ..? ಸುರೇಶ್ ಕುಮಾರ್ ಹೇಳಿದ್ದೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಮಳವಳ್ಳಿ,ಜು.15- ಪಿ ಯು ಸಿ ಫಲಿತಾಂಶ ಸುಲಲಿತವಾಗಿ ಪ್ರಕಟಣೆ ಗೊಂಡಿದ್ದು ಅದೇ ರೀತಿಯಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ಪ್ರಕಟಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.

ಚಾಮರಾಜನಗರ ಜಿಲ್ಲೆ ಉಸ್ತುವಾರಿ ಸಚಿವರಾದ ಇವರು, ಕಾರ್ಯಕ್ರಮ ನಿಮಿತ್ತ ಅಲ್ಲಿಗೆ ತೆರಳುವಾಗ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶಾಸಕ ಡಾ. ಕೆ. ಅನ್ನದಾನಿ ಮತ್ತು ಶಿಕ್ಷಕರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಸಚಿವರಿಗೆ ಗೌರವಾರ್ಪಣೆ ಸಲ್ಲಿಸಿದರು.

ಈ ವೇಳೆ ಪತ್ರಿಕೆಯೊಂದಿಗೆ ಮಾತನಾಡಿದ ಸಚಿವರು, ಇಂದಿನ ಪರಿಸ್ಥಿತಿಯಲ್ಲಿ ಶಾಲೆ ಪ್ರಾರಂಭ ಮಾಡುವುದು ಕ್ಲಿಷ್ಟಕರವಾಗಿದ್ದು, ಆನ್ಲೈನ್ ಶಿಕ್ಷಣ ಪ್ರಾರಂಬಿಸಲಾಗಿದ್ದು ಗ್ರಾಮೀಣ ಮಕ್ಕಳಿಗೆ ಇದರಿಂದ ತೊಂದರೆಯಾಗಿದೆ ಎಂದರು.

ಉನ್ನತ ತಜ್ಞರ ಸಲಹೆ ಸಹಕಾರ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿ, ಮೊದಲು ಜನತೆ ಅರೋಗ್ಯದ ಕಡೆ ಗಮನ ಹರಿಸಿ ಸರ್ಕಾರದ ನಿಯಮಗಳನ್ನು ಪಾಲಿಸಿ ಎಂದು ಸಾರ್ವಜನಿಕರಿಗೆ ಕರೆ ನೀಡಿದರು.

ಶಾಸಕ ಡಾ ಕೆ. ಅನ್ನದಾನಿ, ಸರ್ಕಾರಿ ನೌಕರ ಸಂಘದ ತಾಲ್ಲೂಕ್ ಅಧ್ಯಕ್ಷ ಮಲ್ಲಿಕಾರ್ಜುನಯ್ಯ, ಶಿಕ್ಷಕರ ಸಂಘದ ಕಾರ್ಯದರ್ಶಿ ಶಿವಶಂಕರ, ಶಿಕ್ಷಕರಾದ ಮಹದೇವ್, ಸಿದ್ದರಾಜು, ಶಿವಶಂಕರ್, ಇತರರು ಇದ್ದರು.

Facebook Comments

Sri Raghav

Admin