4 ವರ್ಷದ ಮಗುವಿಗೆ ಯಶಸ್ವಿ ಯಕೃತ್ ಶಸ್ತ್ರಚಿಕಿತ್ಸೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.2- ಪಿತ್ತ ಜನಕಾಂಗ ಸಮಸ್ಯೆಯಿಂದ ಬಳಲುತ್ತಿದ್ದ 4 ವರ್ಷದ ರಾಘವಿ ಎಂಬ ಹೆಣ್ಣು ಮಗುವಿಗೆ ನಗರದ ಆಸ್ಟರ್ ಸಿಎಂಐ ಆಸ್ಪತ್ರೆ ವೈದ್ಯರ ತಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದೆ. ತಾಯಿಯ ಯಕೃತ್ತನ್ನೇ ಮಗುವಿಗೆ ಕಸಿ ಮಾಡಲಾಯಿತು. ವೆಲ್ಲೂರಿನ ಮಗು ತೀವ್ರ ಜ್ವರದಿಂದ ಬಳಲಿತ್ತು. ಪೋಷಕರು ಸ್ಥಳೀಯ ವೈದ್ಯರಲ್ಲಿ ತಪಾಸಣೆ ಮಾಡಿಸಿದಾಗ ಹೊಟ್ಟೆಯಲ್ಲಿ ಲಘುವಾದ ಊತವಿರುವುದು ಪತ್ತೆಯಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಸಿಎಂಐ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು.

ಮಗು ಆಸ್ಪತ್ರೆಗೆ ಬಂದ ನಂತರ ಆಸ್ಪತ್ರೆಯ ಯಕೃತ್ ಕಸಿ ಶಸ್ತ್ರಚಿಕಿತ್ಸಾ ವಿಭಾಗದ ಸಲಹಾ ತಜ್ಞ ಡಾ.ಸೋನಾಲ್ ಅಸ್ತಾನಾ, ಡಾ.ರಾಜೀವ್ ಲೋಚನ್, ಡಾ.ಮಲ್ಲಿಕಾರ್ಜುನ, ಡಾ.ಕೆ.ಕಾರ್ತಿಕ್ ಸೇರಿದಂತೆ ಇತರೆ ವೈದ್ಯರ ತಂಡ ಸುಮಾರು 9 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಕೊನೆಗೂ ಯಶಸ್ವಿಯಾಗಿದೆ.

Facebook Comments