ಸುಶಾಂತ್ ಸಿಂಗ್ ಸಾವು ಪ್ರಕರಣ : ಮತ್ತೊಬ್ಬ ಡ್ರಗ್ ಪೆಡ್ಲರ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಸೆ.3- 0ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪುತ್ ಸಾವು ಪ್ರಕರಣದ ತನಿಖೆ ಚುರುಕುಗೊಂಡಷ್ಟು ಹೊಸ ತಿರುವಗಳನ್ನು ಪಡೆಯುತ್ತಿದೆ.  ಈ ಪ್ರಕರಣದ ಸಂಬಂಧ ಮಾದಕ ನಿಯಂತ್ರಣ ಮಂಡಳಿ ಎನ್‍ಸಿಬಿ ಅಧಿಕಾರಿಗಳು ಇಂದು ಮತ್ತೊಬ್ಬ ಡ್ರಗ್ ಪೆಡ್ಲರ್(ಮಾದಕವಸ್ತು ಮಾರಾಟಗಾರ)ನನ್ನು ಬಂಧಿಸಿದ್ದಾರೆ.

ಈತ ಸುಶಾಂತ್ ಸಿಂಗ್ ಪ್ರೇಯಸಿ ಮತ್ತು ಚಿತ್ರನಟಿ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಜೊತೆ ಸಂಪರ್ಕ ಹೊಂದಿರುವುದು ದೃಢಪಟ್ಟಿದೆ.  ಶೋವಿಕ್ ಹಲವಾರು ಮಾದಕ ವಸ್ತು ಮಾರಾಟಗಾರರೊಂದಿಗೆ ವಾಟ್ಸಪ್‍ನಲ್ಲಿ ಮಾದಕವಸ್ತು ಪೂರೈಕೆ ಕುರಿತು ಸಂದೇಶಗಳನ್ನು ರವಾನಿಸಿರುವ ಮಾಹಿತಿ ಬೆಳಕಿಗೆ ಬಂದಿದೆ.

ಬಸೀತ್, ಸೂರ್ಯದೀಪ್, ಮಲ್ಹೋತ್ರ ಸೇರಿದಂತೆ ಹಲವು ಡ್ರಗ್ ಪೆಡ್ಲರ್‍ಗಳೊಂದಿಗೆ ವಾಟ್ಸಪ್‍ನಲ್ಲಿ ಸಂದೇಶ ರವಾನೆ ಮಾಡಿರುವ ಬಗ್ಗೆ ಈತ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ನಿನ್ನೆಯಷ್ಟೇ ಜೈದ್ ಎಂಬ ಡಗ್ಸ್ ಪೆಡ್ಲರ್‍ಗಳನು ಎನ್‍ಸಿಬಿ ಬಂಧಿಸಿತ್ತು.

ಈ ಮಧ್ಯೆ ಈ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಸಿಬಿಐ ಮತ್ತು ಇಡಿ ಅಧಿಕಾರಿಗಳು ಸುಶಾಂತ್ ಸಿಂಗ್ ಕುಟುಂಬ ಮತ್ತು ರಿಯಾ ಚಕ್ರವರ್ತಿ ಅವರ ಕುಟುಂಬವನ್ನು ಪ್ರತ್ಯೇಕವಾಗಿ ತೀವ್ರ ತನಿಖೆಗೆ ಒಳಪಡಿಸಿದೆ.

Facebook Comments