ನಟ ಸುಶಾಂತ್‍ಸಿಂಗ್ ಅತ್ತಿಗೆ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ.16- ಬಾಲಿವುಡ್‍ನ ಯುವ ನಟ ಸುಶಾಂತ್ ಸಿಂಗ್ ರಜಪೂತ್ ನಿಧನದ ನೋವನ್ನು ಅವರ ಮನೆಯವರು ಮರೆಯುವ ಮುನ್ನವೇ ಮತ್ತೊಂದು ಆಘಾತ ಬಂದೆರಗಿದೆ.

ಮೈದುನ ಸತ್ತ ಸುದ್ದಿ ಕೇಳಿ ಶಾಕ್‍ಗೆ ಒಳಗಾಗಿದ್ದ ಸುಶಾಂತ್‍ರ ಅತ್ತಿಗೆ ಸುಧಾ ಕೂಡ ಸಾವನ್ನಪ್ಪಿದ್ದು ಕುಟುಂಬದವರ ದುಃಖವನ್ನು ಹೆಚ್ಚಿಸಿದೆ.

ಒಂದೆಡೆ ಸುಶಾಂತ್‍ರ ಅಂತ್ಯಕ್ರಿಯಾದಿಗಳು ನಡೆಯುತ್ತಿರುವಾಗಲೇ ಸುಧಾ ಸಾವು ಅವರ ಕುಟುಂಬಕ್ಕೆ ಮತ್ತೊಂದು ಶಾಕ್ ಆಗಿದೆ. ಸುಶಾಂತ್‍ನ ಚಿಕ್ಕಪ್ಪನ ಮಗನ ಪತ್ನಿ ಸುಧಾ ಬಿಹಾರಾ ಪೂರ್ಣಿಯಾದಲ್ಲಿ ಸಾವನ್ನಪ್ಪಿದ್ದಾರೆ.

ಖಿನ್ನತೆಗೆ ಒಳಗಾಗಿದ್ದ ಸುಶಾಂತ್‍ರ ಅಂತ್ಯಕ್ರಿಯೆಯು ನಿನ್ನೆ ಮುಂಬೈನ ವಿಲೆ ಪಾರ್ಲೆ ಸೇವಾ ಸಮಾಜದಲ್ಲಿ ನೆರವೇರಿದ್ದರೆ, ಇಂದು ಅವರ ಅತ್ತಿಗೆಯ ಅಂತ್ಯಕ್ರಿಯೆಯನ್ನು ಕುಟುಂಬವರ್ಗದವರು ನೆರವೇರಿಸಿದ್ದಾರೆ.

Facebook Comments