ನಟ ಸುಶಾಂತ್ ಸಾವಿನ ಪ್ರಕರಣ, ಹಲವು ಸೀಕ್ರೆಟ್ಸ್ ಬಿಚ್ಚಿತ್ತ ರಿಯಾ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.31-ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ತನಿಖೆ ತೀವ್ರಗೊಳಿಸಿದಷ್ಟೂ ಪ್ರಕರಣ ಆಳ ಹೆಚ್ಚಾಗುತ್ತಲೇ ಇದೆ.

ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿ ಎಂದು ಹೆಸರಿಲಾಗಿರುವ ನಟನ ಗೆಳತಿ ರಿಯಾ ಚಕ್ರವತಿ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿ ಕೆಲವು ಸಂಗತಿಗಳನ್ನು ತಿಳಿಸಿದ್ದಾಳೆ.

ನಾನು ಮತ್ತು ರಜಪೂತ್ ಮುಂಬೈನ ಬಾಂದ್ರಾದ ಅಪಾರ್ಟ್‍ಮೆಂಟ್‍ನಲ್ಲಿ ಒಂದು ವರ್ಷ ಒಟ್ಟಿಗೆ ಇದ್ದೆವು. ಸುಶಾಂತ್ ಖಿನ್ನತೆಯಿಂದ ಬಳುತ್ತಿದ್ದ. ನಾನು ಜೂನ್ 8ರಂದು ಅಂದರೆ ಆತ ಆತ್ಮಹತ್ಯೆಗೆ ಮಾಡಿಕೊಳ್ಳುವುದಕ್ಕೆ ಆರು ದಿನಗಳ ಮುನ್ನ ಫ್ಲಾಟ್‍ನಿಂದ ಹೊರಬಂದಿದ್ದೆ ಎಂದು ರಿಯಾ ಚಕ್ರವತಿ ಹೇಳಿದ್ದಾಳೆ.

ಸುಶಾಂತ್ ಸಿಂಗ್ ಖಿನ್ನತೆಯಿಂದ ಬಳಲುತ್ತಿದ್ದ. ನಾವಿಬ್ಬರು ಒಂದು ವರ್ಷ ಜೊತೆಯಾಗಿ ಅಪಾರ್ಟ್‍ಮೆಂಟ್‍ನಲ್ಲಿದ್ದೆವು. ಆದರೆ ಆತನ ಸಾವಿಗೆ ಆತನ ಕುಟುಂಬಸ್ಥರು ನನ್ನ ಮೇಲೆ ವಿನಾಕಾರಣ ಆರೋಪಗಳನ್ನು ಮಾಡುತ್ತಿದ್ದಾರೆ. ಸುಶಾಂತ್ ಸಾವಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಆಕೆ ಅರ್ಜಿಯಲ್ಲಿ ತಿಳಿಸಿದ್ದಾಳೆ.

ಬಿಹಾರದಲ್ಲಿ ಪಾಟ್ನಾದಲ್ಲಿ ದಾಖಲಾಗಿರುವ ನನ್ನ ವಿರುದ್ಧದ ಪ್ರಕರಣವನ್ನು ಮುಂಬೈಗೆ ವರ್ಗಾವಣೆ ಮಾಡಬೇಕೆಂದು ಆಕೆ ಅರ್ಜಿಯಲ್ಲಿ ಕೋರಿದ್ದಾಳೆ.

ರಿಯಾಳ ಖಾತೆಗೆ ಸುಶಾಂತ್ ಭಾರೀ ಪ್ರಮಾಣದ ಹಣವನ್ನು ವರ್ಗಾವಣೆ ಮಾಡಿದ್ದ. ದೊಡ್ಡ ಮಟ್ಟದ ಹಣವನ್ನು ಈಕೆ ವಂಚಿಸಿದ್ದಾಳೆ. ನಟನ ಆತ್ಮಹತ್ಯೆಗೆ ಈಕೆ ಪರೋಕ್ಷವಾಗಿ ಪ್ರಚೋಚನೆ ನೀಡಿದ್ದಾಳೆ ಎಂದು ರಜಪೂತ್ ಕುಟುಂಬದವರು ದೂರು ನೀಡಿದ್ಧಾರೆ.

ಸುಶಾಂತ್ ಆತ್ಮಹತ್ಯೆಯೋ, ಅಥವಾ ಕೊಲೆಯೋ ಎಂಬ ಬಗ್ಗೆ ಪೆÇಲೀಸರು ಮತ್ತು ಇತರ ತನಿಖಾ ಸಂಸ್ಥೆಗಳು ತನಿಖೆಯನ್ನು ತೀವ್ರಗೊಳಿಸಿವೆ. ಬಾಲಿವುಡ್ ನಟ-ನಟಿಯರೂ ಸೇರಿದಂತೆ ಈವರೆಗೆ 40ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ಪೆÇಲೀಸರು ದಾಖಲಿಸಿಕೊಂಡಿದ್ದಾರೆ.

ಈ ಪ್ರಕರಣ ಈಗ ನ್ಯಾಯಾಲಯದ ಮೆಟ್ಟಿಲೇರಿದ್ದು, ಹೊಸ ತಿರುವು ಪಡೆದುಕೊಳ್ಳುತ್ತಿದೆ. ಬಿಜೆಪಿ ನಾಯಕರು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ.

Facebook Comments

Sri Raghav

Admin