ಸುಶಾಂತ್ ಸಾವು ಪ್ರಕರಣ : ಡ್ರಗ್ಸ್ ಜಾಲದ ಇನ್ನೂ 7 ಜನರ ಸೆರೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.14-ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ತನಿಖೆ ತೀವ್ರಗೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟ ಮಾದಕ ವಸ್ತು ಜಾಲದ ಇನ್ನೂ ಏಳು ಜನರನ್ನು ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ಬಂಸಿದೆ. ಬಂತರಿಂದ ಗಾಂಜಾ ಮತ್ತು ಚರಸ್ ವಶಪಡಿಸಿಕೊಳ್ಳಲಾಗಿದೆ.

ಡ್ರಗ್ಸ್ ಪೂರೈಕೆ ಜಾಲದಲ್ಲಿ ಹೆಸರು ಕೇಳಿ ಬಂದಿರುವ ಕರಮ್‍ಜೀತ್ ಸಿಂಗ್ ಆನಂದ್, ಡೈವನ್ ಅಂಟೋನಿ ಫರ್ನಾಂಡಿಸ್, ಸಂಕೇತ್ ಪಾಟೀಲ್, ಅಂಕುಶ್ ಅರೆಂಜಾ, ಸಂದೀಪ್ ಗುಪ್ತಾ, ಅಫ್ತಾಬ್ ಫತ್ಹೆ ಅನ್ಸಾರಿ ಮತ್ತು ಕ್ರಿಸ್ ಕೋಸ್ಟಾ ಎಂಬುವರನ್ನು ಎನ್‍ಸಿಬಿ ಅಕಾರಿಗಳು ಬಂಸಿದ್ದಾರೆ.

ಬಾಲಿವುಡ್ ನಟ ಸಾವಿಗೆ ಸಂಬಂಸಿದಂತೆ ಡ್ರಗ್ಸ್ ಜಾಲದ ಆಯಾಮದಲ್ಲಿ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಎನ್‍ಸಿಬಿ ಬಂತ ಆರೋಪಿಗಳಿಂದ ಮಹತ್ವದ ಸಂಗತಿಗಳನ್ನು ಕಲೆ ಹಾಕಿದ್ದು, ಇನ್ನಷ್ಟು ಜನರು ಬಂತರಾಗುವ ಸಾಧ್ಯತೆ ಇದೆ. ಎಂದು ಉನ್ನತ ಮೂಲಗಳು ತಿಳಿಸಿವೆ.

ಡ್ರಗ್ ಪೆಡ್ಲೆರ್ ಕರಮ್‍ಜೀತ್ ಸಿಂಗ್‍ನಿಂದ ಗಾಂಜಾ ಮತ್ತು ಚರಸ್ ವಶಪಡಿಸಿಕೊಳ್ಳಲಾಗಿದೆ. ಮುಂಬೈನ ದಾದ್ರಾ (ವೆಸ್ಟ್) ಪ್ರದೇಶದಲ್ಲಿ ಡೈವನ್ ಅಂಟೋನಿ ಫರ್ನಾಂಡಿಸ್‍ನನ್ನು ಬಂಸಿದ ಎನ್‍ಸಿಬಿ ಅಕಾರಿಗಳು 500 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಈಗಾಗಲೇ ಈ ಪ್ರಕರಣದಲ್ಲಿ ಅನುಜ್ ಕೇಶ್ವಾನಿ ಮತ್ತು ಕೈಜನ್ ಇಬ್ರಾಹಿಂ ಅವರನ್ನು ಬಂಸಲಾಗಿದೆ. ಅವರು ನೀಡಿದ ಸುಳಿವಿನ ಮೇರೆಗೆ ಮತ್ತಷ್ಟು ಡ್ರಗ್ ಪೆಡ್ಲರ್‍ಗಳನ್ನು ಬಂಸಲಾಗಿದೆ.

ಮೊನ್ನೆಯಷ್ಟೇ ಎನ್‍ಸಿಬಿ ಮುಂಬೈ ಮತ್ತು ಗೋವಾದ ಹಲವಡೆ ಸರಣಿ ದಾಳಿಗಳನ್ನು ನಡೆಸಿ ಕೆಲವು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿತ್ತು.  ಸುಶಾಂತ್‍ಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪದ ಸಂಬಂಧ ಬಂತರಾದ ಚಿತ್ರನಟಿ ರಿಯಾ ಚಕ್ರವರ್ತಿ ವಿಚಾರಣೆ ವೇಳೆ ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ಅಕಾರಿಗಳ ಮುಂದೆ ಮತ್ತಷ್ಟು ಸಂಗತಿಗಳನ್ನು ಈಗಾಗಲೇ ಬಹಿರಂಗಗೊಳಿಸಿದ್ದಾರೆ.

ಬಾಲಿವುಡ್ ತಾರೆ ಮತ್ತು ಹಿರಿಯ ಅಭಿನೇತ ಸೈಫ್ ಅಲಿ ಖಾನ್ ಅವರ ಪುತ್ರಿ ಸಾರಾ ಅಲಿ ಖಾನ್, ಸ್ಯಾಂಡಲ್‍ವುಡ್ ಸೇರಿದಂತೆ ಬಹುಭಾಷಾ ನಟಿ ರಾಕುಲ್ ಪ್ರೀತ್, ಚಿತ್ರ ನಿರ್ಮಾಪಕ ಮುಕೇಶ್ ಛಾಬ್ರಾ, ವಸ್ತ್ರ ವಿನ್ಯಾಸಕಿ ಸೈಮೋನೆ ಕಂಬಾಟಾ, ಸುಶಾಂತ್ ಗೆಳತಿ ಮತ್ತು ಮಾಜಿ ಮ್ಯಾನೇಜರ್ ರೋಹಿಣಿ ಅಯ್ಯರ್ ಡ್ರಗ್ಸ್ ಸೇವಿಸಿದ್ದ ಸಂಗತಿಯನ್ನು ರಿಯಾ ಎನ್‍ಸಿಬಿ ಮುಂದೆ ಬಾಯಿಬಿಟ್ಟಿದ್ದಾರೆ.

ಈ ಬಗ್ಗೆ ತನಿಖೆ ತೀವ್ರಗೊಳಿಸಿರುವ ತನಿಖಾ ಸಂಸ್ಥೆ ಪ್ರಕರಣದಲ್ಲಿ ಹೆಸರಿಸಲ್ಪಟ್ಟಿರುವವರ ವಿಚಾರಣೆಗೆ ಮುಂದಾಗಿದೆ. ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ತನಿಖೆಯ ಭಾಗವಾಗಿ ಮಾದಕ ವಸ್ತುಗಳ ನಿಯಂತ್ರಣ ಮಂಡಳಿ (ಎನ್‍ಸಿಬಿ) ಅಕಾರಿಗಳ ತಂಡಗಳು ನಿನ್ನೆ ಬೆಳಗ್ಗೆಯಿಂದ ಮುಂಬೈ ಮತ್ತು ಗೋವಾದ ವಿವಿಧೆಡೆ ಸರಣೆ ದಾಳಿಗಳನ್ನು ನಡೆಸಿದೆ.

ಮುಂಬೈ ಮತ್ತು ಪಣಜಿಗಳ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ದಾಳಿಗಳು ನಡೆದಿದ್ದು ಚ ಇತ್ರತಾರೆಯರೂ ಸೇರಿದಂತೆ ಕೆಲವರನ್ನು ಅಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಬಗ್ಗೆ ತನಿಖೆ ತೀವ್ರಗೊಳಿಸಿರುವ ತನಿಖಾ ಸಂಸ್ಥೆ ಪ್ರಕರಣದಲ್ಲಿ ಹೆಸರಿಸಲ್ಪಟ್ಟಿರುವವರ ಜಾಡು ಹಿಡಿದು ತನಿಖೆ ನಡೆಸುತ್ತಿದ್ದು, ಇನ್ನೂ ಕೆಲವರು ಬಂಧನಕ್ಕೆ ಒಳಗಾಗುವ ನಿರೀಕ್ಷೆ ಇದೆ.

ಸುಶಾಂತ್ ಸಾವು ಪ್ರಕರಣದಲ್ಲಿ ಡಗ್ಸ್ ಜಾಲದ ನಂಟು ಕೇಳಿ ಬಂದ ನಂತರ ತನಿಖೆಯ ಆಳ ಅಗೆದಷ್ಟು ಹೊಸ ಸಂಗತಿಗಳು ಬೆಳಕಿಗೆ ಬರುತ್ತಿವೆ.

Facebook Comments

Sri Raghav

Admin