ಸುಶಾಂತ್ ಪ್ರಕರಣ : ಆತ್ಮಹತ್ಯೆಯೋ, ಕೊಲೆಯೋ..? ಸೆ.20ಕ್ಕೆ ಲಭಿಸಲಿದೆ ಸ್ಪಷ್ಟ ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.16- ಬಾಲಿವುಡ್‍ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಆತ್ಮಹತ್ಯೆಕಾರಣವೋ ಅಥವಾ ಅವರನ್ನು ಕೊಲೆ ಮಾಡಲಾಗಿದೆಯೇ ಎಂಬ ಬಗ್ಗೆ ಸೆ.20ರಂದು ಸ್ಪಷ್ಟ ಮಾಹಿತಿ ಲಭಿಸಲಿದೆ.

ಸುಶಾಂತ್ ಸಾವು ಕುರಿತುಎಲ್ಲ ಆಯಾಮಗಳಿಂದಲೂ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿರುವ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಸೆಪ್ಟೆಂಬರ್ 20ರಂದು ಭಾನುವಾರ ಬಾಲಿವುಡ್ ನಟನ ಸಾವಿನ ಹಿಂದಿನ ಸ್ಪಷ್ಟಕಾರಣ ತಿಳಿಸಲಿದೆ.

ಹಿರಿಯ ವೈದ್ಯ.ಡಾ. ಸುಧೀರ್ ಗುಪ್ತ ನೇತೃತ್ವದ ಏಮ್ಸ್ ವೈದ್ಯರ ತಂಡ ಭಾನುವಾರ ಸಭೆ ಸೇರಲಿದ್ದು, ಸುಶಾಂತ್ ಸಾವು ಪ್ರಕರಣದಲ್ಲಿಈವರೆಗೆ ನಡೆಸಲಾದ ಮರಣೋತ್ತರ ಪರೀಕ್ಷೆ ಸೇರಿದಂತೆ ವಿವಿಧ ವೈದ್ಯಕೀಯ ಪರೀಕ್ಷೆಗಳ ವರದಿಗಳನ್ನು ಪರಿಶೀಲಿಸಿ ಈ ಬಗ್ಗೆ ಅಂತಿಮ ಅಭಿಪ್ರಾಯ ತಿಳಿಸಲಿದೆ.

ಸುಶಾಂತ್‍ಆತ್ಮಹತ್ಯೆ ಮಾಡಿಕೊಂಡಿಲ್ಲ. ಅವರನ್ನುಕೊಂದು ಹಗ್ಗಕ್ಕೆ ನೇತು ಹಾಕಲಾಗಿದೆ ಎಂದು ನಟನ ಕುಟುಂಬದ ಸದಸ್ಯರು ಮತ್ತು ಬಂಧು-ಮಿತ್ರು ಆರೋಪಿಸಿರುವ ಸಂದರ್ಭದಲ್ಲಿ ಸೆ.20ರಂದು ಸತ್ಯ ಸಂಗತಿ ವೈದ್ಯಕೀಯ ವರದಿಗಳಿಂದ ಸುಸ್ಪಷ್ಟವಾಗಲಿದೆ.

ಈ ಮಧ್ಯೆ ಪ್ರಕರಣಕ್ಕೆ ಸಂಬಂಧಪಟ್ಟ ಮಾದಕ ವಸ್ತು ಜಾಲದ ಇನ್ನೂ ಕೆಲವರನ್ನು ಮಾದಕ ವಸ್ತು ನಿಯಂತ್ರಣ ಮಂಡಳಿ (ಎನ್‍ಸಿಬಿ) ಬಂಧಿಸಿದೆ.

Facebook Comments