ಸಿಬಿಐ-ಇಡಿ ತನಿಖೆಯ ಅಡ್ಡಕತ್ತರಿಯಲ್ಲಿ ಸಿಲುಕಿದ ರಿಯಾ ಚಕ್ರವರ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ,ಆ.8-ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ನಹತ್ಯೆಗೆ ಪ್ರಚೋದನೆ ನೀಡಿದ ಆರೋಪಕ್ಕೆ ಗುರಿಯಾಗಿರುವ ಗೆಳತಿ ರಿಯಾ ಚಕ್ರವರ್ತಿ ಈಗ ಒಂದೆಡೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಇನ್ನೊಂದೆಡೆ ಜಾರಿ ನಿರ್ದೇಶನಾಲಯ (ಇಡಿ) ತನಿಖೆಗಳ ಅಡ್ಡ ಕತ್ತರಿಯಲ್ಲಿ ಸಿಲುಕಿದ್ದಾರೆ.

ರಿಯಾ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಅಕಾರಿಗಳು ಸತತ 9 ತಾಸುಗಳ ಕಾಲ ವಿಚಾರಣೆ ನಡೆಸಿದ್ದಾರೆ. ಸುಶಾಂತ್ ಸಾವು ಪ್ರಕರಣದಲ್ಲಿ ತನಿಖೆ ತೀವ್ರಗೊಳಿಸಿರುವ ಸಿಬಿಐ ಕೂಡ ನಟನ ಪ್ರೇಯಸಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಲಿದೆ.

ಮುಂಬೈನ ಇಡಿ ಕಚೇರಿಯಲ್ಲಿ ನಿನ್ನೆ ಮಧ್ಯಾಹ್ನದಿಂದ ರಾತ್ರಿವರೆಗೂ ರಿಯಾ ವಿಚಾರಣೆ ನಡೆಸಿದ ಅಕಾರಿಗಳು ಅಕ್ರಮ ಹಣ ವರ್ಗಾವಣೆ, ಆಕೆಯ ಬ್ಯಾಂಕ್ ವ್ಯವಹಾರಗಳು ಸೇರಿದಂತೆ ಹಣಕಾಸು ವಿಷಯಗಳಿಗೆ ಸಂಬಂಸಿದ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆದರು.

ಸುಶಾಂತ್ ಬ್ಯಾಂಕ್ ಖಾತೆಗಳಿಂದ ಭಾರೀ ಹಣ ರಿಯಾಗೆ ವರ್ಗಾವಣೆಯಾದ ಮತ್ತು ನಟನ ಅಕೌಂಟ್‍ಗಳಿಂದ ಹಣ ಪಾವತಿ ಮಾಡಿದ ಪ್ರಕರಣಗಳ ಸಂಬಂಧ ಇಡಿ ತೀವ್ರ ತನಿಖೆ ನಡೆಸುತ್ತಿದೆ.

ತನಿಖಾ ಸಂಸ್ಥೆ ಅಕಾರಿಗಳು ತನಿಖೆಯ ಭಾಗವಾಗಿ ರಿಯಾ ಚಕ್ರವರ್ತಿ ತಂದೆ, ಸಹೋದರ ಮತ್ತು ಆಕೆಯ ಸ್ನೇಹಿತರನ್ನು ಕೂಡ ವಿಚಾರಣೆಗೆ ಒಳಪಡಿಸಲಿದೆ.

ಸುಪ್ರೀಂಕೋರ್ಟ್‍ನಲ್ಲಿ ತಮ್ಮ ಅರ್ಜಿ ಪ್ರಕರಣದ ವಿಚಾರಣೆ ಬಾಕಿ ಇರುವುದರಿಂದ ತಮ್ಮ ಹೇಳಿಕೆ ದಾಖಲಿಸಿಕೊಳ್ಳುವುದನ್ನು ಮುಂದೂಡುವಂತೆ ರಿಯಾ ಸಲ್ಲಿಸಿದ್ದ ಮನವಿಯನ್ನು ಇಡಿ ನಿರಾಕರಿಸಿತ್ತು. ಈ ಹಿನ್ನಲೆಯಲ್ಲಿ ನಿನ್ನೆ ಮುಂಬೈನಲ್ಲಿರುವ ಇಡಿ ಕಚೇರಿಗೆ ಹಾಜರಾದ ರಿಯಾ ವಿಚಾರಣೆಗೆ ಒಳಪಟ್ಟರು.

ಈ ಪ್ರಕರಣದಲ್ಲಿ ತಮ್ಮನ್ನು ವಿಚಾರಣೆಗೆ ಒಳಪಡಿಸುವಿಕೆಯನ್ನು ಪಾಟ್ನಾದಿಂದ ಮುಂಬೈಗೆ ವರ್ಗಾಯಿಸಬೇಕೆಂದು ಕೋರಿ ರಿಯಾ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮನವಿ ವಿಚಾರಣೆ ನಡೆಯುತ್ತಿದೆ.

ಈ ಮಧ್ಯೆ, ಬಿಹಾರ ರಾಜ್ಯ ಸರ್ಕಾರವು ರಿಯಾ ಅರ್ಜಿಯನ್ನು ವಜಾಗೊಳಿಸುವಂತೆ ಸುಪ್ರೀಂಕೋರ್ಟ್‍ಗೆ ಮನವಿ ಮಾಡಿದೆ.
ಈ ಮಧ್ಯೆ ಸಿಬಿಐ ಸುಶಾಂತ್ ಸಾವು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ರಿಯಾ ಸೇರಿದಂತೆ ಈ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ಎಲ್ಲರನ್ನೂ ತೀವ್ರ ತನಿಖೆಗೆ ಒಳಪಡಿಸಲಿದೆ.

Facebook Comments

Sri Raghav

Admin