ಕಾಶ್ಮೀರ ಗಡಿಯಲ್ಲಿ ಹೆಚ್ಚಾಯ್ತು ಡ್ರೋಣ್ ಓಡಾಟ, ಸ್ಥಳೀಯರಲ್ಲಿ ಆತಂಕ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀನಗರ, ಆ.1- ಗಡಿ ರೇಖೆಯ ಬಳಿ ಡ್ರೋಣ್ ಮಾದರಿಯ ಅನಾಮಧೇಯ ಹಾರಾಟದ ವಸ್ತುಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದು , ಭಾರತೀಯ ಗಡಿ ರಕ್ಷಣಾ ಪಡೆ (ಬಿಎಸ್‍ಎಫ್) ಅವುಗಳನ್ನು ಹೊಡೆದುರುಳಿಸಿವೆ.ಅನುಮಾನಾಸ್ಪದವಾಗಿ ಹಾರಾಟ ನಡೆಸುವ ಈ ವಸ್ತುವಿನ ಬಗ್ಗೆ ಜಮ್ಮು ಕಾಶ್ಮೀರದ ಹಲವು ಜನವಸತಿ ಪ್ರದೇಶಗಳ ಜನರು ಕೂಡ ಆತಂಕಗೊಂಡಿದ್ದಾರೆ.

ಕೇವಲ ಮೂರು, ನಾಲ್ಕು ನಿಮಿಷಗಳ ಕಾಲ ಹಾರಾಟ ನಡೆಸಿ ಕಣ್ಮರೆಯಾಗುವಂತಹ ಈ ವಸ್ತುಗಳನ್ನು ಜನರು ಮೊಬೈಲ್‍ನಲ್ಲಿ ಸೆರೆ ಹಿಡಿಯುತ್ತಿದ್ದು , ಕಳೆದ ರಾತ್ರಿ 8 ಗಂಟೆಯಲ್ಲಿ ಸಾಂಬಾ ಜಿಲ್ಲೆಯಲ್ಲಿ 9 ಗಂಟೆ ಮತ್ತು 10 ಗಂಟೆ ಬಳಿ ಪತ್ತೆಯಾಗಿವೆ.

ಸೋಟಕಗಳನ್ನು ಇವು ಹೊತ್ತು ತರುತ್ತಿವೆ ಎಂಬ ಅನುಮಾನ ಮೂಡುತ್ತಿವೆ ಯಾದರೂ ಹಾರುವ ವಾಹಕಗಳನ್ನು ಹೊಡೆದುರುಳಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Facebook Comments

Sri Raghav

Admin