ಸಂಸತ್ ಭವನದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾಶ್ಮೀರಿ ಯುವಕ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.27- ವಿಜಯ್ ಚೌಕ್ನದ ಸಂಸತ್ ಭವನದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕಾಶ್ಮೀರ ಮೂಲದ ಯುವಕನನ್ನು ಸಿಆರ್‍ಪಿಎಫ್ ಪೊಲೀಸರು ಬಂಧಿಸಿದ್ದಾರೆ.

ಜಮ್ಮುಕಾಶ್ಮೀರ ಭುಗ್ದಂ ಜಿಲ್ಲೆಯ ನಿವಾಸಿ ಎಂದು ಹೇಳಿಕೊಳ್ಳುವ ಈತ ದೆಹಲಿ ವಿಜಯ್ ಚೋಕಾದ ಸಂಸತ್ ಭವನದ ಮುಂದೆ ನಿನ್ನೆ ಸಂಯಾಸ್ಪದವಾಗಿ ಅಡ್ಡಾಡುತ್ತಿದ್ದಾಗ ಕರ್ತವ್ಯದಲ್ಲಿದ್ದ ಸಿಆರ್‍ಪಿಎಫ್ ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಯುವಕ ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಿದ್ದ. ಆತನ ಬಳಿ ಇದ್ದ ದಾಖಲೆಗಳನ್ನು ಪರಿಶೀಲಿಸಿದಾಗ , ಕೋಡ್‍ವರ್ಡ್‍ಗಳಿರುವ ಕೆಲವು ಮಾಹಿತಿ ಲಭ್ಯವಾಗಿದೆ. ಒಂದು ಆಧಾರ್ ಕಾರ್ಡ್ ಮತ್ತು ಚಾಲನಾ ಪರವಾನಗಿ ಸಹ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಎರಡೂ ಐಡಿಗಳಲ್ಲಿ ವಿಭಿನ್ನ ಹೆಸರುಗಳಿವೆ. ಚಾಲನಾ ಪರವಾನಗಿ ಒಂದು ಫಿರ್ದೌಸ್ ಹೆಸರಿನಲ್ಲಿ ಇದ್ದರೆ, ಆಧಾರ್ ಕಾರ್ಡ್‍ನಲ್ಲಿ ಮಂಜೂರ್ ಅಹ್ಮದ್ ಅಹಂಗರ್ ಎಂಬ ಹೆಸರಿದೆ.

ಜಮ್ಮುಕಾಶ್ಮೀರದ ಬುದ್ಗಾಮ್ ಜಿಲ್ಲೆಯ ರಾಥೂನ್ ಬೀರ್ವಾ ಮೂಲದವನಾದ ಈತನಿಂದ ಒಂದು ಚೀಲ ಕೂಡ ಪತ್ತೆಯಾಗಿದ್ದು, ಬಂತ ವ್ಯಕ್ತಿಯು ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದು, ಇದು ಅವನ ಬಗ್ಗೆ ಮತ್ತಷ್ಟು ಅನುಮಾನವನ್ನು ಹುಟ್ಟುಹಾಕಿದೆ ಎಂದು ಆರ್‍ಪಿಎಫ್ ಅಕಾರಿಗಳು ಹೇಳಿದ್ದಾರೆ.

2016ರಲ್ಲೇ ದೆಹಲಿಗೆ ಬಂದಿರುವುದಾಗಿ ಒಮ್ಮೆ ಹೇಳಿದರೆ ಮತ್ತೊಮ್ಮೆ ಕೊರೊನಾ ಸಂಕಷ್ಟದ ಲಾಕ್‍ಡೌನ್ ವೇಳೆ ಇಲ್ಲಿಗೆ ಬಂದೆ ಎಂದು ಹೇಳುತ್ತಿದ್ದಾನೆ. ಆತನ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ, ಮೊದಲು ಜಾಮಿಯಾ ಪ್ರದೇಶದಲ್ಲಿ, ನಂತರ ನಿಜಾಮುದ್ದೀನ್‍ನ ಜಮಾ ಮಸೀದಿ ಪ್ರದೇಶದ ಬಳಿ ಇದ್ದ ಎಂದು ತಿಳಿದುಬಂದಿದೆ.

ಶಂಕಿತನನ್ನು ಈಗ ದೆಹಲಿ ಪೊಲೀಸರಿಗೆ ಒಪ್ಪಿಸಲಾಗಿದ್ದು, ಅವರನ್ನು ಸಂಸತ್ ಭವನ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.

Facebook Comments

Sri Raghav

Admin