ಸ್ವಚ್ಛತಾ ಅಭಿಯಾನ : ಪ್ರಧಾನಿ ಮೋದಿಗೆ ಗ್ಲೋಬಲ್ ಗೋಲ್‍ ಕೀಪರ್ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ನ್ಯೂಯಾರ್ಕ್, ಸೆ.3 (ಪಿಟಿಐ)- ದಿಟ್ಟ ನಾಯಕತ್ವ ಮತ್ತು ಸ್ವಚ್ಛ ಭಾರತ್ ಅಭಿಯಾನ ಬದ್ಧತೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕದ ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಷನ್‍ನಿಂದ ಪ್ರತಿಷ್ಠಿತ ಗ್ಲೋಬಲ್ ಗೋಲ್‍ಕೀಪರ್ ಅವಾರ್ಡ್(ಜಾಗತಿಕ ಗುರಿಸಾಧಕ ಪ್ರಶಸ್ತಿ) ಪ್ರಕಟಿಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಮೋದಿ ಅವರಿಗೆ ಈ ಪ್ರಶಸ್ತಿ ನೀಡಲಾಗುವುದು.

ಪ್ರಧಾನಿ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ(ಯುಎನ್‍ಜಿಎ)ದಲ್ಲಿ ಪಾಲ್ಗೊಳ್ಳಲು ನ್ಯೂಯಾರ್ಕ್‍ಗೆ ಭೇಟಿ ನೀಡಲಿದ್ದು, ಜಾಗತಿಕ ವಾಣಿಜ್ಯ ವೇದಿಕೆಯ ಉನ್ನತ ಮಟ್ಟದ ಸಮಾವೇಶದಲ್ಲಿ ವಿಶ್ವ ನಾಯಕರು ಮತ್ತು ಕಾರ್ಪೊರೇಟರ್ ಜಗತ್ತಿನ ಪ್ರಮುಖರ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಈ ಸಂದರ್ಭದಲ್ಲಿ ಮೋದಿ ಅವರಿಗೆ 2019ನೇ ಸಾಲಿನ ಗ್ಲೋಬಲ್ ಗೋಲ್‍ಕೀಪರ್ ಅವಾರ್ಡ್ ಪುರಸ್ಕಾರ ನೀಡಿ ಗೌರವಿಸಲಾಗುವುದು ತಮ್ಮ ದೇಶ, ವಿಶ್ವಕ್ಕಾಗಿ ಅತ್ಯಂತ ಪರಿಣಾಮಕಾರಿ ಕಾರ್ಯಗಳ ಅನುಷ್ಠಾನದ ಮೂಲಕ ಜಾಗತಿಕ ಗುರಿ ಸಾಧನೆಗೆ ಉಪಕ್ರಮಗಳನ್ನು ಕೈಗೊಂಡ ರಾಜಕೀಯ ನಾಯಕರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತದೆ.

ಅಕ್ಟೋಬರ್ 2, 2014ರಂದು ಪ್ರಧಾನಿ ಚಾಲನೆ ನೀಡಿದ ಸ್ವಚ್ಛಭಾರತ ಆಂದೋಲನ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದೆ. ಈ ಯೋಜನೆ ಅನ್ವಯ ಈವರೆಗೆ 90 ದಶಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ.

Facebook Comments