ಶಾಕಿಂಗ್ : ಲವ್ವಲ್ಲಿ ಬಿದ್ದು ಪೀಠತ್ಯಾಗ ಮಾಡಿದ ಸ್ವಾಮೀಜಿ..!

ಈ ಸುದ್ದಿಯನ್ನು ಶೇರ್ ಮಾಡಿ

ಕೊಪ್ಪಳ,ಮಾ.17- ಸರ್ವಸಂಗ ಪರಿತ್ಯಾಗಿಯಾಗಿ ಸನ್ಯಾಸತ್ವ ಸ್ವೀಕರಿಸಿದ್ದ ಸ್ವಾಮೀಜಿ ನಂತರ ಪ್ರೀತಿಯ ಬಲೆಗೆ ಸಿಲುಕಿ ಪೀಠ ತ್ಯಾಗ ಮಾಡಿ ನಾಪತ್ತೆಯಾಗಿದ್ದರು. ಇದೀಗ ತಮ್ಮ ಪ್ರೇಯಸಿಯೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಜಿಲ್ಲೆಯ ಅಳವಂಡಿ ಗ್ರಾಮದ ಸಿದ್ದೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ ಪ್ರೀತಿಗಾಗಿ ಕಳೆದ ಜನವರಿಯಲ್ಲಿ ಪೀಠತ್ಯಾಗ ಮಾಡಿ ನಾಪತ್ತೆಯಾಗಿದ್ದರು. ಇದೀಗ ಸಾಮಾಜಿಕ ಜಾಲತಾಣದ ಮೂಲಕ ಪತ್ತೆಯಾಗಿದ್ದಾರೆ.

ಮುಂಡರಗಿ ಕಾಲೇಜಿನಲ್ಲಿ ಸ್ವಾಮೀಜಿ ಪಾಠ ಮಾಡಲು ಹೋಗುತ್ತಿದ್ದರು. ಆಗ ಕಾಲೇಜಿಗೆ ಬರುತ್ತಿದ್ದ ಯುವತಿಯೊಬ್ಬಳ ಮೇಲೆ ಸ್ವಾಮೀಜಿಗೆ ಪ್ರೇಮಾಂಕುರವಾಗಿದೆ. ಕೊನೆಗೆ ಸ್ವಾಮೀಜಿ ಪ್ರೀತಿಸಿದ ಯುವತಿಗಾಗಿ ಪೀಠವನ್ನ ತ್ಯಾಗ ಮಾಡಿ ನಾಪತ್ತೆಯಾಗಿದ್ದರು.

ಈ ಬಗ್ಗೆ ಮಠದ ಭಕ್ತರು ಹಾಗೂ ಜನರು ಪ್ರಶ್ನಿಸಿದಾಗ, ಸಿದ್ದಲಿಂಗ ಸ್ವಾಮೀಜಿಗಳು ವೈಯಕ್ತಿಕ ಕಾರಣಕ್ಕಾಗಿ ಪೀಠ ತ್ಯಾಗ ಮಾಡಿದ್ದಾರೆಂದು ಮಠದ ಆಡಳಿತ ಮಂಡಳಿ ಉತ್ತರಿಸಿ ಸುಮ್ಮನಾಗಿತ್ತು.

ಇದೀಗ ಮೂರು ತಿಂಗಳ ಬಳಿಕ ಸ್ವಾಮೀಜಿ ಹುಡಗಿಯೊಂದಿಗೆ ಪ್ರತ್ಯಕ್ಷವಾಗಿದ್ದಾರೆ. ಯುವತಿಯೊಂದಿಗೆ ಸ್ವಾಮೀಜಿ ಹುಟ್ಟುಹಬ್ಬ ಆಚರಿಕೊಳ್ಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Facebook Comments

Sri Raghav

Admin