ಭಾರತ ಆಧ್ಯಾತ್ಮಿಕ ದೇಶ : ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ

ಈ ಸುದ್ದಿಯನ್ನು ಶೇರ್ ಮಾಡಿ

ತಿಪಟೂರು , ಅ. 27- ಭಾರತ ಇಡೀ ಜಗತ್ತಿಗೆ ಜ್ಞಾನದ, ಭಕ್ತಿಯ ಜ್ಯೋತಿಯನ್ನು ನೀಡಿದ ದೇಶವಾಗಿದ್ದು ಜನರು ಆಧ್ಯಾತ್ಮಿಕವಾಗಿ ಹೆಚ್ಚಿನ ಜ್ಞಾನವಂತರಾಗಿದ್ದಾರೆ. ಪ್ರತಿಯೊಬ್ಬರು ಕೊರೊನಾ ದಿನಗಳಲ್ಲಿ ಎಚ್ಚರಿಕೆಯಿಂದಿರಬೇಕೆಂದು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ದಸರೀಘಟ್ಟದ ಆದಿಚುಂಚನಗಿರಿ ಶಾಖಾ ಮಠದಲ್ಲಿ ವಿಜಯದಶಮಿಯಂದು ಸಾಂಕೇತಿಕವಾಗಿ ಚೌಡೇಶ್ವರಿ ದೇವಿಯ 28ನೇ ವರ್ಷದ ಮುಳ್ಳುಗದ್ದಿಗೆ ಉತ್ಸವದ ನಂತರ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಕೊರೊನಾ ದಿನಗಳಲ್ಲಿ ಜನರ ಭಕ್ತಿಯನ್ನು ನೋಡಿದರೆ ಆಶ್ವಚರ್ಯವಾಗುತ್ತದೆ. ದೇವಾಸ್ಥಾನಗಳು ಮುಚ್ಚಿದರು, ಮಠ-ಮಂದಿರಗಳನ್ನು ಮುಚ್ಚಿದರೂ ಆದರೆ ಮನೆ ಮನೆಗಳಲ್ಲಿ ದೇವಾಲಯಗಳು ಪ್ರಾರಂಭವಾಗಿ ಆಚಾರ-ವಿಚಾರಗಳು ಪುನಾರಾರ್ವನೆಯಾಗಿರುವುದು ಸಂತೋಷದ ಸಂಗತಿ ಎಂದು ಹೇಳಿದರು.

ಜಗತ್ತಿನ ಸೃಷ್ಠಿಕರ್ತ ಪರಮಾತ್ಮನಾದ್ದರಿಂದ ಮನುಷ್ಯನಾದವನು ಧರ್ಮದಾನಗಳಿಂದ ಬದುಕಬೇಕು. ವಿಜ್ಞಾನ ಎಷ್ಟೇ ಮುಂದುವರೆದರೂ ಜ್ಞಾನವೆಂಬುದು ಮಸುಕಾಗಿದೆ. ಪ್ರಕೃತಿಯ ಮುಂದೆ ಮನುಷ್ಯ ಕ್ಷಣಿಕನಾಗಿದ್ದಾನೆ. ಅಂತಃಕರಣ ಶುದ್ಧಿಗೊಂಡರೆ ಮತ್ತಷ್ಟು ಶಕ್ತಿ ಪಡೆಯಬಹುದು. ಮನುಷ್ಯನ ಪಯಣ ಯಾವಾಗಲೂ ಒಳ್ಳೆಯ ದಿಕ್ಕಿನಲ್ಲಿ ಸಾಗಲಿ. ಕೊರೊನಾ ದಿನಗಳಲ್ಲಿ ಹಬ್ಬ ಮಾಡುವುದು ಕಷ್ಟದ ಕೆಲಸ. ಭಕ್ತರು ಭಕ್ತಿ ಭಾವದಿಂದ ಮೈಮರೆಯದೇ ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ ವ್ಯವಾಸ್ಥಾಪಕ ನಿರ್ದೇಶಕ ಡಾ.ಪ್ರಕಾಶನಾಥ ಸ್ವಾಮೀಜಿ, ಮಂಗಳೂರಿನ ಶಾಖಾಮಠದ ಧರ್ಮಪಾಲನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಮಂಜುನಾಥಸ್ವಾಮೀಜಿ, ದಸರೀಘಟ್ಟದ ಚಂದ್ರಶೇಖರನಾಥ ಸ್ವಾಮೀಜಿ, ನಾರಾಯಣನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಹುಳಿಮಾವು ಶಾಖಾಮಠ ಶೈಲನಾಥ ಸ್ವಾಮೀಜಿ, ನಿವೃತ್ತ ಪೊಲೀಸ್ ಅಧಿಕಾರಿ ರಾಮಕೃಷ್ಣಪ್ಪ, ಡಾ.ಜಿತೇಂದ್ರ, ಡಿವೈಎಸ್‍ಪಿ ಚಂದನ್ ಕುಮಾರ್, ಗುಡಿಗೌಡರು ಹುಚ್ಚೇಗೌಡರು, ಶ್ರೀಧರಶಾಸ್ತ್ರೀ ಹೊಳಗೆರಹಳ್ಳಿ ಮತ್ತಿತರರು ಹಾಜರಿದ್ದರು.

Facebook Comments