ವಿಭಿನ್ನವಾಗಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದ ಸಚಿವರುಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.4-ಇಂದು ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಬಹುತೇಕ ಮಂದಿ ದೇವರ ಹೆಸರಿನಲ್ಲಿ ಪ್ರತಿಜ್ಞಾ ವಿ ಸ್ವೀಕರಿಸಿದರೆ, ಕೆಲವರು ತಮ್ಮ ಇಷ್ಟ ದೈವಗಳ ಹೆಸರು, ರೈತರು ಹಾಗೂ ಕ್ಷೇತ್ರದ ಜನರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು.

ಪ್ರಮಾಣ ವಚನ ಸ್ವೀಕರಿಸಿದ ಆನಂದ್ ಸಿಂಗ್ ಅವರು, ವಿಜಯನಗರದ ಆರಾಧ್ಯ ದೈವ ಪಂಪ ವಿರೂಪಾಕ್ಷ ಹಾಗೂ ತಾಯಿ ಭುವನೇಶ್ವರಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.ಲಂಬಾಣಿ ಸಮುದಾಯ ಪ್ರತಿನಿಸುವ ಪ್ರಭು ಚವ್ಹಾಣ್ ಅವರು ಲಂಬಾಣಿ ಉಡುಗೆತೊಟ್ಟು ಸಂತ ಸೇವಾಲಾಲ್ ಹಾಗೂ ಗೋಮಾತೆ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದರು.

ಮುರುಗೇಶ್ ನಿರಾಣಿ ಅವರು, ದೇವರು ಹಾಗೂ ರೈತರ ಹೆಸರಿನಲ್ಲಿ, ಶಿವರಾಮ್ ಹೆಬ್ಬಾರ್ ಅವರು ದೇವರು ಹಾಗೂ ಕ್ಷೇತ್ರದ ಜನರ ಹೆಸರಿನಲ್ಲಿ, ಬಿ.ಸಿ ಪಾಟೀಲ್ ಅವರು ರೈತರು ಹಾಗೂ ಜಗಜ್ಯೋತಿ ಬಸವೇಶ್ವರರ ಹೆಸರಿನಲ್ಲಿ ಪ್ರಮಾಣ ಮಾಡಿದರು.

ಶಶಿಕಲ್ಲಾ ಜೊಲ್ಲೆ ಅವರು ದೇವರು ಹಾಗೂ ಕ್ಷೇತ್ರದ ಜನರ ಹೆಸರಿನಲ್ಲಿಹಾಗೂ ಶಂಕರ್ ಪಾಟೀಲ್ ಮುನೇನಕೊಪ್ಪ ಅವರು ದೇವರು ಹಾಗೂ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

Facebook Comments

Sri Raghav

Admin