ಈಜಲು ಹೋದ ಐವರು ನೀರು ಪಾಲು

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು,ನ.25- ಬೀಗರ ಔತಣಕ್ಕೆ ಬಂದಿದ್ದ ಯುವಕರಲ್ಲಿ ಐದು ಮಂದಿ ಈಜಲು ಹೋಗಿ ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಜಿಲ್ಲೆಯ ವಸ್ತಾರೆ ಬಳಿ ಹಿರೇಕೆರೆಯಲ್ಲಿ ಈ ಘಟನೆ ನಡೆದಿದೆ.

ರಘು(22), ದಿಲೀಪ್(23), ದೀಪಕ್(25) , ಸುದೀಪ್(22) ಸೇರಿದಂತೆ ಐದು ಮಂದಿ ನೀರುಪಾಲಾಗಿರುವ ನತದೃಷ್ಟರು.  ಆಲ್ದೂರು ಠಾಣೆ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿ ಹಿರೇಕೆರೆಯಲ್ಲಿ ಶೋಧ ಕಾರ್ಯ ಕೈಗೊಂಡಿದ್ದಾರೆ.

Facebook Comments