ನೈಋತ್ಯ ರೈಲ್ವೆಯಲ್ಲಿ ಗೂಡ್ಸ್ ಗಾರ್ಡ, ಸ್ಟೇಷನ್ ಮಾಸ್ಟರ್ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

ನೈಋತ್ಯ ರೈಲ್ವೆಯ ವ್ಯಾಪ್ತಿಯು ಕರ್ನಾಟಕ ರಾಜ್ಯದ ಬಹುತೇಕ ಎಲ್ಲ ಭಾಗಗಳನ್ನು (ಮಂಗಳೂರು, ಕೊಂಕಣ ರೈಲ್ವೆಯ ಭಾಗ ಹೊರತುಪಡಿಸಿ), ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಪಶ್ಚಿಮ ಭಾಗ ಮತ್ತು ಹೊಸೂರು ತಾಲೂಕಿನ ಬಹುತೇಕ ರೈಲ್ವೆ ಮಾರ್ಗಗಳನ್ನು ಒಳಗೊಂಡಿದೆ.

2003 ರ ಏಪ್ರಿಲ್ 1 ರಂದು ವಲಯವು ಅಸ್ತಿತ್ವಕ್ಕೆ ಬಂದಿತು. ಇದರ ಪ್ರಧಾನ ಕಚೇರಿ ಹುಬ್ಬಳ್ಳಿ ಯಲ್ಲಿದೆ. ಮತ್ತು ಹುಬ್ಬಳ್ಳಿ , ಮೈಸೂರು , ಮತ್ತು ಬೆಂಗಳೂರು ಮೂರು ವಿಭಾಗಗಳನ್ನು ಒಳಗೊಂಡಿದೆ. ಕಲಬುರ್ಗಿಯನ್ನು ನಾಲ್ಕನೇ ವಿಭಾಗವಾಗಿ ಶೀಘ್ರದಲ್ಲೇ ಸ್ಥಾಪಿಸಲಾಗುವುದು ಮತ್ತು ಇದರ ಸಿದ್ಧತೆ ಈಗಾಗಲೇ ಆರಂಭವಾಗಿದೆ.

ಸೌತ್ ವೆಸ್ಟರ್ನ್ ರೈಲ್ವೆ ನೇಮಕಾತಿ 2019: ಗೂಡ್ಸ್ ಗಾರ್ಡ್, ಸ್ಟೇಷನ್ ಮಾಸ್ಟರ್ ಮತ್ತು ಜೂನಿಯರ್ ಕ್ಲರ್ಕ್-ಕಮ್-ಟೈಪಿಸ್ಟ್ ಹುದ್ದೆಗಳಂತಹ ವಿವಿಧ ಹುದ್ದೆಗಳಲ್ಲಿ ನೇಮಕಗೊಳ್ಳಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಒಟ್ಟು 179 ಹುದ್ದೆಗಳ ನಿಗದಿಪಡಿಸಲಾಗಿದೆ.

24.06.2019 ಅರ್ಜಿ ಸಲ್ಲಿಸಲು ಆರಂಭದ ದಿನಾಂಕವಾಗಿದ್ದು. 15.07.2019ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅರ್ಜಿದಾರರು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 12 ನೇ / ಪದವಿ ಪಾಸಾಗಿರಬೇಕು.

ಈ ಆರ್‌ಆರ್‌ಸಿ ನೇಮಕಾತಿ 2019 ಕ್ಕೆ ಕನಿಷ್ಠ ಮತ್ತು ಗರಿಷ್ಠ ವಯಸ್ಸಿನ ಮಿತಿ 18 ರಿಂದ 42 ವರ್ಷಗಳು ಆಗಿರಬೇಕು. ಆಯ್ಕೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ಆಪ್ಟಿಟ್ಯೂಡ್ ಟೆಸ್ಟ್, ಡಾಕ್ಯುಮೆಂಟ್ ವೆರಿಫಿಕೇಶನ್ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಆಧರಿಸಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಮುಂದಿನ ಲಿಂಕ್ ಭೇಟಿ ನೀಡಿ:https://www.rrchubli.in/GDCE_Notification_No01_2019.pdf

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ