ಸಿಡ್ನಿ ಟೆಸ್ಟ್ : 338ನ್ಗೆ ಆಸ್ಟ್ರೇಲಿಯ ಆಲೌಟ್
ಸಿಡ್ನಿ, ಜ.8- ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ 3ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯ ತಂಡ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡು 338 ರನ್ಗೆ ಆಲೌಟ್ ಆಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯದ ಆರಂಭದಲ್ಲೇ ಬಿರುಸಿನ ಹೊಡೆತಗಳ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಅವರ ವಿಕೆಟ್ ಕಳೆದುಕೊಂಡು ಆಘಾತ ಸ್ಥಿತಿಯಲ್ಲಿತ್ತು. ಆದರೆ, ಅನುಭವಿ ಬ್ಯಾಟ್ಸ್ಮನ್ ಸ್ಟೀವನ್ ಸ್ಮಿತ್ ಅವರ ಭರ್ಜರಿ ಸೆಂಚುರಿ ಹಾಗೂ ಲಾಬಸ್ಚಾಗ್ನೆ ಅವರ 91 ರನ್ ಗಳಿಕೆಯಿಂದ ಆಟದ ಗತಿಯನ್ನು ತಿರುಗಿಸಿದರು.
ಆಸ್ಟ್ರೇಲಿಯ 2 ವಿಕೆಟ್ ಕಳೆದುಕೊಂಡು 206 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದಾಗ, ತಂಡಕ್ಕೆ ಮಾರಕವಾಗಿದ್ದು ರವೀಂದ್ರ ಜಡೇಜÁ. ಜಡೇಜÁ ಅವರು ಮೊದಲ ಇನ್ನಿಂಗ್ಸ್ನಲ್ಲಿ 4 ವಿಕೆಟ್ ಕಬಳಿಸಿ 62 ರನ್ ನೀಡಿದ್ದಾರೆ. ಪ್ರಥಮ ಇನ್ನಿಂಗ್ಸ್ನಲ್ಲಿ ಉತ್ತಮ ಮೊತ್ತ ಕಲೆಹಾಕಲು ಯೋಜನೆ ರೂಪಿಸಿದ್ದ ಆಸ್ಟೇಲಿಯ ತಂಡ 3ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 338 ರನ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲೌಟ್ ಆಗಿದೆ.
ಸ್ಮಿತ್ ಅವರು 266 ಬಾಲ್ ಎದುರಿಸಿ 131 ರನ್ ಮಾಡಿ ಔಟಾಗಿ ತಮ್ಮ ಜೀವಮಾನದ 27 ಶತಕ ದಾಖಲಿಸಿದ್ದಾರೆ. ಅವರ ಜತೆಯಲ್ಲಿ ಉತ್ತಮ ಆಟ ಪ್ರದರ್ಶಿಸಿ ಲಾಬಸ್ಚಾಗ್ನೆ 196 ಬಾಲ್ಗಳನ್ನು ಎದುರಿಸಿ 91 ರನ್ಗೆ ಔಟಾಗಿದ್ದಾರೆ. ಆನಂತರ ಬಂದ ಆಟಗಾರರು ಕ್ರೀಸ್ನಲ್ಲಿ ಬಹಳ ಹೊತ್ತು ನಿಲ್ಲದೆ ವಿಕೆಟ್ ಒಪ್ಪಿಸಿದ್ದಾರೆ. ಆಸ್ಟ್ರೇಲಿಯ 338ಕ್ಕೆ ಎಲ್ಲ ವಿಕೆಟ್ ಒಪ್ಪಿಸಿ ಇನ್ನಿಂಗ್ಸ್ ಕೊನೆಗೊಳಿಸಿದೆ.
ನಂತರ ಇನ್ನಿಂಗ್ಸ್ ಆರಂಭಿಸಿದ ಭಾರತದ ಶುಭ್ಮನ್ ಗಿಲ್ ಮತ್ತು ರೋಹಿತ್ ಶರ್ಮ ಬಹಳ ಹೊತ್ತು ಕ್ರೀಸ್ನಲ್ಲಿ ನಿಲ್ಲದೆ ಕಡಿಮೆ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಆದರೆ, ನಾಯಕ ಅಜಿಂಕ್ಯ ರಹಾನೆ 40 ಬಾಲ್ಗಳಲ್ಲಿ 5 ರನ್ ಗಳಿಸಿದರೆ, ಚೇತೇಶ್ವರ ಪೂಜಾರ 53 ಚೆಂಡುಗಳನ್ನು ಎದುರಿಸಿ ಕೇವಲ 9 ರನ್ ಗಳಿಸಿ ಆಡುತ್ತಿದ್ದಾರೆ.
ಭಾರತ ಎದುರಿಸಿದ 45 ಓವರುಗಳಲ್ಲಿ 96 ರನ್ ಗಳಿಸಿ 2 ವಿಕೆಟ್ ಒಪ್ಪಿಸಿ ಆಟ ಮೂರನೇ ದಿನಕ್ಕೆ ಮುಂದುವರಿಸಿದೆ. 242 ರನ್ ಗಳಿಂದ ಭಾರತ ಹಿಂದಿದೆ.
ಸ್ಕೋರ್ ವಿವರ:
ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್ 338-10 (105.4 ಓವರ್)
ಭಾರತ- 96-2 (45 ಓವರ್)
ರೋಹಿತ್ ಶರ್ಮ 26 (77 ಬಾಲ್ಗಳು)
ಶುಭ್ಮನ್ ಗಿಲ್ 50 (101 ಬಾಲ್ಗಳು)
ಪೂಜರ 9 (53) ಬ್ಯಾಟಿಂಗ್
ರಹಾನೆ 5 (40) ಬ್ಯಾಟಿಂಗ್
ಇತರೆ 6 ರನ್ಗಳು.