ಕೊರೋನಾ ವೈರಸ್ ಓಡಿಸಲು ದೇವಾಲಯಗಳಲ್ಲಿ ಮೃತ್ಯುಂಜಯಮಂತ್ರ ಪಠನಕ್ಕೆ ಶರವಣ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.1-ಮಾರಕ ಕೊರೋನಾ ವೈರಸ್ ಓಡಿಸಲು ರಾಜ್ಯದ ಎಲ್ಲ ದೇವಾಲಯಗಳಲ್ಲಿ ಮಹಾ ಮೃತ್ಯುಂಜಯಮಂತ್ರ ಪಠನ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಸಲಹೆ ಮಾಡಿದ್ದಾರೆ.

ಕೊರೊನ ಎಂಬ ಮಹಾಮಾರಿಯನ್ನು ಓಡಿಸುವ ನಿಟ್ಟಿನಲ್ಲಿ ಪ್ರತಿದಿನ ದೇವಸ್ಥಾನಗಳಲ್ಲಿ 8ಗಂಟೆಗೆ ಸರಿಯಾಗಿ ಅಥವಾ ಅನುಕೂಲ ವಾಗುವಂತಹ ಒಂದೇ ಸಮಯದಲ್ಲಿ ಐದು ನಿಮಿಷಗಳ ಕಾಲ ಮಹಾ ಮೃತ್ಯುಂಜಯಮಂತ್ರ ಹಾಗೂ ಓಂಕಾರ ವನ್ನು ಆಡಿಯೋ ನ ಮುಖಾಂತರ, ಸಾಧ್ಯವಾದರೆ ಜೋರಾಗಿ ಹಾಕುವುದು.

ಎಲ್ಲಾ ದೇವಸ್ಥಾನಗಳಲ್ಲೂ ಒಂದೇ ಸಮಯದಲ್ಲಿ ಹಾಕುವುದರಿಂದ ಅತ್ಯುತ್ತಮವಾದ ಸಕಾರಾತ್ಮಕ ವಾಯುಮಂಡಲ ನಿರ್ಮಾಣವಾಗುತ್ತದೆ. ಅತ್ಯುತ್ತಮವಾದ ಪರಿಣಾಮವನ್ನು ಕಾಣಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅದೇ ಸಮಯದಲ್ಲಿ ಜನರು ಕೂಡ ಮನೆಯಲ್ಲಿ ಅದೇ ಮಂತ್ರವನ್ನು ಜಪಿಸುವುದರಿಂದ ಅವರಲ್ಲಿರುವ ಭಯ, ದುಗುಡ, ಆತಂಕ ಕಡಿಮೆಯಾಗುವುದು. ನಮ್ಮ ಜಪ, ತಪ, ಮಂತ್ರಗಳಲ್ಲಿ ಅತ್ಯದ್ಭುತವಾದ ಶಕ್ತಿಯಿದೆ ಸರ್. ಕೋರೋಣ ವನ್ನು ಕೊನೆಗಾಸುವಲ್ಲಿ ಖಂಡಿತವಾಗಲೂ ಸಹಾಯವಾಗುತ್ತದೆ ಎಂದಿದ್ದಾರೆ.

18ರ ಶತಮಾನದ ದಲ್ಲಿ ಪ್ಲೇಗ್ ಎಂಬ ಮಹಾಮಾರಿ ಬಂದಾಗ, ಎಲ್ಲಾ ಊರುಗಳಲ್ಲಿ ಎಲ್ಲಾ ಧಾರ್ಮಿಕ ಸಂಘಟನೆಗಳು ಸೇರಿ ಶಂಖ ಊದಿ, ಜಾಗಟೆಯನ್ನು ಭಾರಿಸಿ ಮಹಾಮಾರಿಯನ್ನು ಹೊಡೆದೋಡಿಸುವಂಥ ಪ್ರಯತ್ನವನ್ನು ಮಾಡಿದ್ದರರು. ಅದರಲ್ಲಿ ಯಶಸ್ಸನ್ನು ಕೂಡ ಕಂಡಿದ್ದರು ಎಂದು ಹೇಳಿದ್ದಾರೆ.

Facebook Comments

Sri Raghav

Admin