ಜನರಿಗೆ ಅಗತ್ಯ ವಸ್ತುಗಳನ್ನು ಸರ್ಕಾರವೇ ಉಚಿತವಾಗಿ ವಿತರಿಸಬೇಕು : ಟಿ.ಎ.ಶರವಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.4: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕೆಲವು ಅಗತ್ಯ ವಸ್ತುಗಳನ್ನು ಉಚಿತವಾಗಿ ಸರ್ಕಾರವೇ ವಿತರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಅವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಮಹಾಮಾರಿ ಕೊರೋನಾ ಸೋಂಕು ತಡೆಗಟ್ಟಲು ಸರ್ಕಾರ ನಿರಂತರವಾಗಿ ಹೋರಾಡುತ್ತಿರುವುದರಿಂದ ರಾಜ್ಯವೇ ಲಾಕ್‌ಡೌನ್‌ ಆಗಿ ಸುಮಾರು 10 ದಿನಗಳು ಕಳೆದಿವೆ.

ಇಂತಹ ಸಮಯದಲ್ಲಿ‌ ಜನಸಾಮಾನ್ಯರು ಸಹ ಸರ್ಕಾರದ ಜೊತೆ ಕೈಜೋಡಿಸಿ ಈ ಸೋಂಕಿನ ವಿರುದ್ಧ ಹೋರಾಟಕ್ಕಿಳಿದಿರುವುದು ಹೆಮ್ಮೆಯ ಸಂಗತಿ. ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಹಲವಾರು ಸಮಸ್ಯೆಗಳಿಂದ ಜನರು ಕಂಗಾಲಾಗಿರುವುದೂ
ಅಷ್ಟೇ ಸತ್ಯ.

ಕ ಇದನ್ನು ಮನಗಂಡು ಸರ್ಕಾರ ನಿರ್ಗತಿಕರು, ಬಡವರು, ಕೂಲಿಕಾರರು, ಕೊಳಗೇರಿ ವಾಸಿಗಳು ಮತ್ತು ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಕೆಎಂಎಫ್ ವತಿಯಿಂದ ಪ್ರತಿದಿನ ಒಂದು ಲೀಟರ್ ಹಾಲು ಮತ್ತು ಉಜ್ವಲ ಯೋಜನೆಯಡಿ ಎಲ್‌ಪಿಜಿ ಗ್ಯಾಸ್ ಸೌಲಭ್ಯ ಹೊಂದಿರುವ ಫಲಾನುಭವಿಗಳಿಗೆ ಉಚಿತ ಸಿಲಿಂಡರ್ ಪೂರೈಕೆ ಮಾಡಲು ಕ್ರಮಕೈಗೊಂಡಿರುವುದು ಸ್ವಾಗತಾರ್ಹ.

ಆದರೆ ಈ ಕ್ರಮಗಳು ಸರಿಯಾದ ರೀತಿಯಲ್ಲಿ ಇನ್ನೂ  ದುರ್ಬಲ ವರ್ಗದವರಿಗೆ ತಲುಪಿಲ್ಲ. ಹಾಗಾಗಿ ಲಾಕ್‌ಡೌನ್‌ ನಂತಹ ಕಷ್ಟದ ಸಮಯದಲ್ಲಿ ತುರ್ತಾಗಿ ಈ ಸೌಲಭ್ಯಗಳು ವ್ಯವಸ್ಥಿತವಾಗಿ ಸಿಗುವಂತಾಗಬೇಕು. ಅದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಟಿ.ಎ.ಶರವಣ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Facebook Comments

Sri Raghav

Admin