ಟೀಂ ಇಂಡಿಯಾಗೆ ಮತ್ತೊಂದು ‘ಸೂಪರ್’ ಗೆಲುವು..!

ಈ ಸುದ್ದಿಯನ್ನು ಶೇರ್ ಮಾಡಿ

ವೆಲ್ಲಿಂಗ್ಟನ್ , ಜ.31- ಕಳೆದ ಪಂದ್ಯದಲ್ಲಿ ಸೂಪರ್ ಓವರ್‍ನಲ್ಲಿ ಗೆಲ್ಲುವ ಮೂಲಕ ಸರಣಿ ಗೆದ್ದಿದ್ದ ಟೀಂಇಂಡಿಯಾ ಇಂದು ಕೂಡ ಸೂಪರ್ ಓವರ್ ನಲ್ಲಿ ಗೆಲ್ಲುವ ಮೂಲಕ ಸತತ 2ನೇ ಸೂಪರ್ ಓವರ್ ಗೆದ್ದ ಕೀರ್ತಿಗೆ ಭಾಜನವಾಗಿದೆ.

ಇದರಿಂದ 5 ಪಂದ್ಯಗಳ ಪೈಕಿ 4-0ಯಿಂದ ಸರಣಿ ಮುನ್ನಡೆಯಲ್ಲಿರುವ ಕೊಹ್ಲಿ ಪಡೆ ಕ್ಲೀನ್ ಸ್ವೀಪ್ ಮಾಡಲು ಹಾತೊರೆಯುತ್ತಿದೆ. ಭಾರತ ತಂಡದ ಪರ ಸೂಪರ್ ಓವರ್  ಬೌಲಿಂಗ್ ಮಾಡಿದ ಬೂಮ್ರಾ 13 ರನ್‍ಗಳನ್ನು ಬಿಟ್ಟುಕೊಟ್ಟರು. ಸೀಫರ್ಟ್ 8 ರನ್ ಗಳಿಸಿದರು. ಟೀಂ ಇಂಡಿಯಾದ ಪರ ನಾಯಕ ಕೊಹ್ಲಿ 6 ಗಳಿಸಿ ಅಜೇಯರಾಗಿ ಉಳಿದರು, ಕನ್ನಡಿಗ ಲೊಕೇಶ್ ರಾಹುಲ್ 10 ರನ್ ಗಳಿಸಿ ಔಟಾದರು. ನ್ಯೂಜಿಲೆಂಡ್ ಪರ ಸೋಥಿ ಸೂಪರ್ ಓವರ್ ಮಾಡಿದರು.

ಇದಕ್ಕೆ ಮುನ್ನ ಭಾರತ ನೀಡಿದ 166 ರನ್‍ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಕೊನೆಯ ಓವರ್‍ನಲ್ಲಿ ಗೆಲುವಿನ ಅವಕಾಶ ಕೈಚೆಲ್ಲಿದರು. ಶಾರ್ದೂಲ್ ಠಾಕೂರ್ ಮಾಡಿದ ಕೊನೆಯ ಓವರ್‍ನಲ್ಲಿ ಗೆಲ್ಲಲು ನ್ಯೂಜಿಲ್ಯಾಂಡ್‍ಗೆ 7 ರನ್‍ಗಳು ಬೇಕಾಗಿತ್ತಾದರೂ ಆ ಓವರ್‍ನಲ್ಲಿ 4 ವಿಕೆಟ್‍ಗಳು ಬಿದ್ದಿದ್ದರಿಂದ ನ್ಯೂಜಿಲೆಂಡ್ ಟೈ ಮಾಡಿಕೊಂಡಿತು.

# ಸ್ಕೋರ್ ವಿವರ: ಭಾರತ 165/8
ಕೆ.ಎಲ್.ರಾಹುಲ್-39, ಮನೀಷ್ ಪಾಂಡೆ- ಅಜೇಯ 59, ಶಾರ್ದೂಲ್ ಠಾಕುರ್-20 ರನ್
ನ್ಯೂಜಿಲೆಂಡ್ ಪರ ಇಶ್ ಸೋಥಿ 3, ಬೆನೆಟ್-2, ಸೌಥಿ, ಕುಲಿಗ್ಗನ್, ಸೆನೆಟರ್ ತಲಾ 1 ವಿಕೆಟ್ ಕಬಳಿಸಿದರು.
ನ್ಯೂಜಿಲೆಂಡ್ 165/7
ಕಾಲಿನ್ ಮುನ್ರೊ-64, ಸೆಫೆಟ್-57, ಟೇಲರ್-24
ಭಾರತ ಪರ ಶಾರ್ದೂಲ್ ಠಾಕೂರ್2, ಬೂಮ್ರಾ, ಚಹಲ್ ತಲಾ 1 ವಿಕೆಟ್ ಕಬಳಿಸಿದರು.
ಪಂದ್ಯ ಶ್ರೇಷ್ಠ: ಶಾರ್ದೂಲ್ ಠಾಕೂರ್
ಮುಂದಿನ ಪಂದ್ಯ:ಮೌಂಟ್‍ಮುನುಗ್ಗುನಲ್, ಫೆ.2 ರಂದು

Facebook Comments

Sri Raghav

Admin