ಐಸಿಸಿ ಟಿ-20 ಪಂದ್ಯಾವಳಿ : ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಪ್ರೇಮಿಗಳ ಕಾತುರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.10- ಇದೇ ಪ್ರಥಮ ಬಾರಿಗೆ ಐಸಿಸಿ ಮಹಿಳಾ ಹಾಗೂ ಪುರುಷರ ಟಿ-20 ಕ್ರಿಕೆಟ್ ಪಂದ್ಯಾವಳಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದ್ದು , ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹೊಂದಿದೆ ಎಂದು ಆಸ್ಟ್ರೇಲಿಯಾ ಪ್ರವಾಸೋದ್ಯಮದ ದೇಶೀಯ ವ್ಯವಸ್ಥಾಪಕ ನಿಶಾಂತ್ ಕಾಶಿಕರ್ ತಿಳಿಸಿದರು.

ಖಾಸಗಿ ಹೊಟೇಲ್‍ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಟಿ-20 ಪಂದ್ಯಾವಳಿಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ಮಹಿಳೆಯರ ಟಿ-20 ವಿಶ್ವ ಕಪ್ 2020 ಫೆಬ್ರುವರಿ 21ರಿಂದ ಮಾರ್ಚ್ 8ರವರೆಗೆ ಹಾಗೂ ಪುರುಷರ ಟಿ-20 ವಿಶ್ವಕಪ್ 2020 ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ನಡೆಯಲಿದೆ ಎಂದು ತಿಳಿಸಿದರು.

ಭಾರತದಿಂದ ಪಂದ್ಯಾವಳಿ ವೀಕ್ಷಣೆಗೆ ಬರುವ ಭಾರತೀಯರಿಗೆ ಅಗತ್ಯವಿರುವ ವೀಸಾ, ವಿಮಾನ ಟಿಕೆಟ್ ಕಾಯ್ದಿರಿಸುವಿಕೆ ಹಾಗೂ ಇನ್ನಿತರ ಸೌಲಭ್ಯಗಳನ್ನು ಪಡೆಯಲು ಏಕಗವಾಕ್ಷಿಯಲ್ಲೇ ನೀಡಲು ವ್ಯವಸ್ಥೆ ಮಾಡಲಾಗಿದೆ ಎಂದರು.

ಭಾರತದಿಂದ ತೆರಳುವ ಪ್ರವಾಸಿಗರಿಗೆ ವೀಸಾ ಅವಧಿ 12 ತಿಂಗಳು ಹೊಂದಿದ್ದು, ಕ್ರಿಕೆಟ್ ವೀಕ್ಷಿಸಲು ಬರುವ ಎಲ್ಲ ಪ್ರವಾಸಿಗರಿಗೆ ಆಸ್ಟ್ರೇಲಿಯಾದ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅಗತ್ಯ ಸೌಲ್ಯಭಗಳನ್ನು ಕಲ್ಪಿಸಲು ಆಸ್ಟ್ರೇಲಿಯಾದ ಪ್ರವಾಸದ್ಯೋಮ ಇಲಾಖೆ ಸಜ್ಜಾಗಿದೆ.

ಈ ಬಾರಿ ವಿಶ್ವದಾದ್ಯಂತ ಅಭಿಮಾನಿಗಳು ಕ್ರಿಕೆಟ್ ವೀಕ್ಷಿಸಲು ಆಸ್ಟ್ರೇಲಿಯಾಕ್ಕೆ ಬರುವ ನಿರೀಕ್ಷೆ ಇದೆ. ಮಹಿಳಾ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಫೈನಲ್ಸ್ ನಡೆಯಲಿದೆ.

Facebook Comments