ದೇಶಾದ್ಯಂತ ಕೊರೊನಾ ಹಬ್ಬಲು ಕಾರಣವಾದ ತಬ್ಲಿಘೀ ಮುಖ್ಯಸ್ಥನಿಗೂ ಕೋವಿಡ್-19 ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.23- ದೇಶಾದ್ಯಂತ ಕಿಲ್ಲರ್ ಕೊರೊನಾ ಸೋಂಕು ಉಲ್ಬಣಗೊಳ್ಳಲು ಕಾರಣವಾದ ತಬ್ಲಿಘೀ ಜಮಾತ್ ಮುಖ್ಯಸ್ಥ ಮೌಲಾನಾ ಸಾದ್‍ಗೂ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.

ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಮೌಲ್ವಿ ಸಾದ್ ನೇತೃತ್ವದಲ್ಲಿ ಬೃಹತ್ ಧಾರ್ಮಿಕ ಸಮಾವೇಶವನ್ನು ಮಾರ್ಚ್ ಎರಡನೇ ವಾರದಲ್ಲಿ ಆಯೋಜಿಸಲಾಗಿತ್ತು. ಇದಾದ ನಂತರ ದೇಶಾದ್ಯಂತ ಸೋಂಕು ಹಬ್ಬಲು ಕಾರಣವಾಗಿತ್ತು. ಇದರ ಸಂಘಟಕ ಮೌಲ್ವನಾ ಸಾದ್ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ.

ಮೌಲಾನಾ ಸಾದ್ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಅವರ ಪರ ವಕಾಲತ್ತು ವಹಿಸಿರುವ ಫುಜೈಲ್ ಆಯ್ಯುಬ್ ಹೇಳಿದ್ದಾರೆ.  ನೀತಿ ನಿಯಮಗಳನ್ನು ಗಾಳಿಗೆ ತೂರಿ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಬೃಹತ್ ಧಾರ್ಮಿಕ ಸಮಾವೇಶ ಆಯೋಜಿಸಿದ ನಂತರ ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ಸೋಂಕು ವ್ಯಾಪಿಸಿತ್ತು.

ಅಲ್ಲದೆ, ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಯೂ ತಬ್ಲಿಘೀ ಸಮಾವೇಶಕ್ಕೆ ಸಂಬಂಧಪಟ್ಟ ಸಾಂಕ್ರಾಮಿಕ ರೋಗ ಪ್ರಕರಣಗಳು ಕಂಡುಬಂದು ಸಾವು-ನೋವು ಸಂಭವಿಸಿದೆ.

Facebook Comments

Sri Raghav

Admin