150ಕ್ಕೂ ಹೆಚ್ಚು ಮಕ್ಕಳ ಬಲಿ ಪಡೆದ ಎನ್ಸಿಪಾಲಿಟಿಸ್ ತಡೆಗೆ ಸಮಾರೋಪಾದಿ ಮುನ್ನೆಚ್ಚರಿಕಾ ಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ಗಯಾ,ಜೂ.28- ಕಳೆದ ಒಂದು ತಿಂಗಳಿಂದಲೂ ಮುಜಾಫರ್‍ಪುರ್ ಸೇರಿದಂತೆ ಬಿಹಾರದ 16 ಜಿಲ್ಲೆಗಳಲ್ಲಿ 150ಕ್ಕೂ ಹೆಚ್ಚು ಮಕ್ಕಳನ್ನು ಬಲಿತೆಗೆದುಕೊಂಡು ಮೆದುಳು ಉರಿಯೂತ ಸೋಂಕು ತಡೆಗಟ್ಟಲು ಸಮಾರೋಪಾದಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಅಕ್ಯೂಟ್ ಎನ್ಸಿಫಲಿಟಿಸ್ ಸಿಂಡ್ರೋಮ್(ಎಇಎಸ್) ಸೋಂಕಿಗೆ ಲಸಿಕೆ ನೀಡಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅನುಗ್ರಹ್ ನಾರಾಯಣ್ ಮಗದ ವೈದ್ಯಕೀಯ ಕಾಲೇಜು(ಎಎನ್‍ಎಂಎಂಸಿ) ಆಸ್ಪತ್ರೆಯಲ್ಲಿ ಹೆಚ್ಚುವರಿ ವಾರ್ಡ್ ತೆರೆಯಲಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಿಜಯ್ ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.

ರಜೆಯಲ್ಲಿರುವ ವೈದ್ಯರನ್ನು ಕರ್ತವ್ಯಕ್ಕೆ ಕರೆಸಿಕೊಳ್ಳಲಾಗಿದ್ದು, ಹೊಸ ವಾರ್ಡ್‍ನಲ್ಲಿ ಹೆಚ್ಚುವರಿ 20 ಹಾಸಿಗೆಗಳನ್ನು ಒದಗಿಸಲಾಗಿದೆ. ಎಲ್ಲಾ ರೀತಿಯ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಎಇಎಸ್ ಸೋಂಕಿನ ವಿರುದ್ಧ ಹೋರಾಡಲು ಸಿದ್ದರಾಗಿದ್ದೇವೆ ಎಂದು ಹೇಳಿದ್ದಾರೆ.

ಸಮಸ್ಯೆ ಪರಿಹರಿಸಲು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಂಪರ್ಕದಲ್ಲಿದ್ದು, ಅಗತ್ಯವಿರುವಷ್ಟು ವೈದ್ಯರ ತಂಡವನ್ನು ಪಾಳಿ ಮೇಲೆ ಕೆಲಸಕ್ಕೆ ನಿಯೋಜಿಸಲಾಗಿದೆ ಎಂದಿದ್ದಾರೆ.

ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರುವ ಲಸಿಕಾ ಹಾಕುವ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸಬೇಕಿದ್ದು, ಎಇಎಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುನ್ನೆಚ್ಚರಿಕೆಯಿಂದ ಕೈಗೊಂಡಿರುವ ಈ ಪಾತ್ರವಹಿಸಬೇಕೆಂದು ಅವರು ಮಾಧ್ಯಮ ಪ್ರತಿನಿಧಿಗಳಲ್ಲೂ ಮನವಿ ಮಾಡಿದ್ದಾರೆ.

Facebook Comments