ಮುಂಬೈ ದಾಳಿಯ ರೂವಾರಿ ರಾಣಾ ಭಾರತಕ್ಕೆ ಹಸ್ತಾಂತರ ಸದ್ಯಕ್ಕಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಲಾಸ್‍ಏಂಜಲಿಸ್,ಜೂ.25-ಮುಂಬೈ ದಾಳಿಯ ರೂವಾರಿ ತಹಾವುರ್ ರಾಣಾ ಭಾರತಕ್ಕೆ ಹಸ್ತಾಂತರಗೊಳ್ಳುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ. 160 ಮಂದಿ ಸಾವಿಗೆ ಕಾರಣಕರ್ತನಾದ ರಾಣಾ ಸಧ್ಯ ಅಮೆರಿಕಾದ ಜೈಲಿನಲ್ಲಿದ್ದು ಆತನನ್ನು ಇನ್ನು ಕೆಲ ದಿನಗಳ ಕಾಲ ಭಾರತಕ್ಕೆ ಹಸ್ತಾಂತರಿಸುವುದು ಬೇಡ ಎಂದು ಅಲ್ಲಿನ ನ್ಯಾಯಾಲಯ ಆದೇಶ ನೀಡಿದೆ.

ರಾಣಾ ಗಡಿಪಾರು ಕುರಿತಂತೆ ವಾದ ವಿವಾದ ಆಲಿಸಿದ ಲಾಸ್‍ಏಂಜಲಿಸ್‍ನ ಮ್ಯಾಜಿಸ್ಟ್ರೇಟ್ ನ್ಯಾಯಮೂರ್ತಿ ಜಾಕ್ವೇಲಿನ್ ಚೂಲ್ಜಿಯನ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಜು.15ರೊಳಗೆ ಮತ್ತಷ್ಟು ಪುರಾವೆ ಸಲ್ಲಿಸುವಂತೆ ಸೂಚಿಸಿ ಅಲ್ಲಿಯವರೆಗೆ ರಾಣಾ ಅಮೆರಿಕಾ ಜೈಲಿನಲ್ಲೇ ಇರಲಿ ಎಂದು ಆದೇಶಿಸಿದ್ದಾರೆ.

ಪಾಕ್ ಮೂಲದ ರಾಣಾ ಹಾಗೂ ಹೆಡ್ಲಿ ಸ್ನೇಹಿತರಾಗಿದ್ದು ಇಬ್ಬರೂ ಸಂಚು ರೂಪಿಸಿ ಮುಂಬೈ ದಾಳಿ ನಡೆಸಿದ ಪರಿಣಾಮ 166 ಮಂದಿ ಪ್ರಾಣ ಕಳೆದುಕೊಂಡು ಇನ್ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಹೀಗಾಗಿ ರಾಣಾ ಅವರನ್ನು ನಮಗೆ ಹಸ್ತಾಂತರಿಸುವಂತೆ ಭಾರತ ಮನವಿ ಮಾಡಿಕೊಂಡಿತ್ತು.

Facebook Comments