ಮತ್ತೆ ಮುಂಬೈ ತಾಜ್ ಹೋಟೆಲ್ ಟಾರ್ಗೆಟ್ ಮಾಡಿದ ಪಾಕ್ ಉಗ್ರರು, ಹೈಅಲರ್ಟ್ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜೂ.30-ದೇಶದ ವಾಣಿಜ್ಯ ರಾಜಧಾನಿ ಮುಂಬೈನ ಪ್ರತಿಷ್ಠಿತ ತಾಜ್ ಸಪ್ತತಾರಾ ಹೋಟೆಲ್ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳು ದಾಳಿ ನಡೆಸಯವ ಆತಂಕವಿದ್ದು, ಭಾರೀ ಕಟ್ಟೆಚ್ಚರ ವಹಿಸಲಾಗಿದ್ದು, ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.

ಪಾಕಿಸ್ತಾನ ಸ್ಟಾಕ್ ಎಕ್ಸ್‍ಚೇಂಜ್ (ಷೇರುಪೇಟೆ) ಕಟ್ಟಡದ ಮೇಲೆ ನಿನ್ನೆ ನಡೆದ ಉಗ್ರಗಾಮಿಗಳ ದಾಳಿಯಲ್ಲಿ 11 ಮಂದಿ ಹತರಾದ ಘಟನೆ ಬೆನ್ನಲ್ಲೇ ದಕ್ಷಿಣ ಮುಂಬೈನ ಕೊಲಬಾ ಪ್ರದೇಶದಲ್ಲಿರುವ ತಾಜ್ ಸೆವೆನ್‍ಸ್ಟಾರ್ ಹೋಟೆಲ್ ಮೇಲೆ ದಾಳಿಗೆ ಉಗ್ರರು ಸಜ್ಜಾಗಿದ್ದಾರೆಂಬ ಗುಪ್ತಚರ ವರದಿಗಳ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದ್ದು, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಇದೇ ತಾಜ್ ಹೋಟೆಲ್ ಮೇಲೆ ಪಾಕಿಸ್ತಾನದ ಭಯೋತ್ಪಾದಕರು 26/11ರಂದು ನಡೆಸಿದ ದಾಳಿಯಲ್ಲಿ ಸಾವು ನೋವು ಉಂಟಾಗಿತ್ತು.  ಪಾಕಿಸ್ತಾನದ ಭಯೋತ್ಪಾದಕರ ತಾಜ್ ಹೋಟೆಲ್ ಅಲ್ಲದೇ ಪ್ರಮುಖ ಸ್ಥಳಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದ್ದು ವಾಣಿಜ್ಯ ನಗರಿಯಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದೆ.

Facebook Comments