ಆ.15ರವರೆಗೆ ತಾಜ್‍ಮಹಲ್ ಓಪನ್ ಇಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

ಆಗ್ರಾ,ಜು.29-ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 15ರವರೆಗೆ ತಾಜ್‍ಮಹಲ್ ತೆರೆಯುವುದಿಲ್ಲ. ಸೋಂಕನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಆಗಸ್ಟ್ 15ರ ನಂತರದಲ್ಲಿ ತೆರೆಯುವ ಸಾಧ್ಯತೆ ಇಲ್ಲ. ಅದಕ್ಕಿಂತಲೂ ಒಂದೆರೆಡು ವಾರ ವಿಸ್ತರಣೆಯಾಗಬಹುದು.

ಜುಲೈ 6 ರಿಂದ ಎಲ್ಲಾ ಪ್ರವಾಸಿ ತಾಣಗಳನ್ನು ರಾಜ್ಯ ಹಾಗೂ ಜಿಲ್ಲಾಡಳಿತ ಒಪ್ಪಿಗೆ ಮೇರೆಗೆ ತೆರೆಯಲಾಗುತ್ತದೆ ಎಂದು ಸಚಿವ ಪ್ರಹ್ಲಾದ್ ಪಟೇಲ್ ತಿಳಿಸಿದ್ದರು.

ಜುಲೈ 6 ರಂದು 2 ಸಾವಿರಕ್ಕೂ ಹೆಚ್ಚು ಪ್ರವಾಸಿ ತಾಣಗಳನ್ನು ತೆರೆಯಲಾಗಿತ್ತು. ಆಗ್ರಾದಲ್ಲಿ ತಾಜ್ ಮಹಲ್ ಸೇರಿ ಕೆಲವೇ ಸ್ಮಾರಕಗಳು ಇನ್ನೂ ತೆರೆದಿಲ್ಲ.

ಈ ಪ್ರದೇಶಗಳು ಕಂಟೈನ್ಮೆಂಟ್ ಜೋನ್‍ಗೆ ಒಳಪಡದೆ ಬಫರ್ ಜೋನ್‍ನಲ್ಲಿದ್ದರೆ ಈಗಲೇ ತೆರೆಯಲು ಸಮ್ಮತಿ ಸೂಚಿಸುತ್ತೇವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಭು ನರೇನ್ ಸಿಂಗ್ ತಿಳಿಸಿದ್ದಾರೆ.

ನಗರದಲ್ಲಿ 55 ಹೊಸ ಪ್ರಕರಣಗಳು ಪತ್ತೆಯಾಗಿವೆ. 70 ಸಕ್ರಿಯ ಪ್ರಕರಣಗಳಿವೆ. ಕೊರೊನಾ ಸೋಂಕಿತ ಪ್ರಕರಣಗಳು ಕಡಿಮೆಯಾಗುತ್ತಿವೆ. ಶೀಘ್ರವೇ ಹೊಸ ನಿಯಮಗಳು ಬರಲಿವೆ. ಮುಂದಿನ 2-4 ವಾರಗಳ ಕಾಲ ಸ್ಮಾರಕಗಳನ್ನು ತೆರೆಯದೇ ಇರಲು ನಿರ್ಧರಿಸಲಾಗಿದೆ.

Facebook Comments

Sri Raghav

Admin