ತಾಳಗುಪ್ಪ-ಹೊನ್ನಾವರ ರೈಲ್ವೆ ಯೋಜನೆ ಅಧಿಕಾರಿಗಳ ಜೊತೆ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.15- ತಾಳಗುಪ್ಪ-ಹೊನ್ನಾವರ ಮಾರ್ಗದ 82 ಕಿಲೋ ಮೀಟರ್ ದೂರದ ರೈಲ್ವೆ ಯೋಜನೆ ಕೈಗೆತ್ತಿಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ. 25 ದಿನದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಕಾಂಗ್ರೆಸ್‍ನ ಬಿ.ಕೆ.ಹರಿಪ್ರಸಾದ್ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ತಾಳಗುಪ್ಪ-ಹೊನ್ನಾವರ ಯೋಜನೆ ಸರ್ವೇ ಮಾಡಲಾಗಿದೆ. ಶೇ.50-50 ವೆಚ್ಚದಲ್ಲಿ ಕೈಗೆತ್ತಿಕೊಳ್ಳುವ ಪ್ರಸ್ತಾವನೆಗೆ ಅಂಗೀಕಾರ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಹಿಂದೆ 9 ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಅನುಮತಿ ಸಿಕ್ಕಿದೆ. ಹಿಂದಿನ ರೈಲ್ವೆ ಸಚಿವರಾದ ಸುರೇಶ್ ಅಂಗಡಿ ಅವುಗಳನ್ನು ಆರಂಭಿಸಲು ಆಸಕ್ತಿ ವಹಿಸಿದ್ದರು.ಹಿಂದಿನ ಸರ್ಕಾರಗಳು ಭೂ ಸ್ವಾಧೀನ ವೆಚ್ಚ ದುಪ್ಪಟ್ಟು ಮಾಡಿದ್ದರಿಂದ ಯೋಜನಾ ವೆಚ್ಚವು ದುಬಾರಿಯಾಗಿದೆ. ರಾಜ್ಯ ಸರ್ಕಾರಕ್ಕೆ ಹೆಚ್ಚುವರಿಯಾಗಿ 3500 ಕೋಟಿ ಹೊರೆಯಾಗಿದೆ.

ಭೂ ಸ್ವಾಧೀನಕ್ಕಾಗಿಯೇ 10 ಸಾವಿರ ಕೋಟಿ ಕೊಡಬೇಕಿದೆ. ಕೆಲವೆಡೆ ಪರಿಸರವಾದಿಗಳು ವಿರೋಧ ಮಾಡಿ, ನ್ಯಾಯಾಲಯಕ್ಕೆ ಹೋಗಿ ತಡೆಯಾe್ಞÉ ತಂದಿದ್ದಾರೆ. ನೆನೆಗುದಿಗೆ ಬಿದ್ದಿರುವ 9 ಯೋಜನೆಗಳನ್ನು ಆಧ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.

Facebook Comments