ಆಫ್ಘಾನ್ ಮೇಲೆ ನಿರ್ಬಂಧ ವಿಧಿಸಲು ಅಮೆರಿಕ ಸಂಸದರ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್,ಸೆ.17- ವಿಶ್ವಸಂಸ್ಥೆ ಪಟ್ಟಿಯಲ್ಲಿ ಭಯೋತ್ಪಾದಕರೆಂದು ಗುರುತಿಸಲ್ಪಟ್ಟಿರುವವರು ಆಫ್ಘಾನ್ ಸರ್ಕಾರದಲ್ಲಿ ಸಚಿವರಾಗಿರುವುದರಿಂದ ತಾಲಿಬಾನ್ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಬೇಕು ಎಂದು ಅಮೆರಿಕಾದ ರಿಪಬ್ಲಿಕನ್ ಪಕ್ಷದ ಸಂಸದರು ಒತ್ತಾಯಿಸಿದ್ದಾರೆ.

ಆಫ್ಘಾನ್‍ನಲ್ಲಿ ಭಯೋತ್ಪಾದಕರು ಸರ್ಕಾರ ರಚಿಸಿರುವುದರಿಂದ ಆ ದೇಶದ ಮೇಲೆ ನಿರ್ಬಂಧ ವಿಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.ಮಾರ್ಕ್  ರುಬಿಯೋ, ಟಾಮಿ ಟುಬರ್‍ವಿಲ್ಲೆ, ಮೋರೆ ಕ್ಯಾಪಿಟೊ, ಡನ್ ಸುಲ್ಲಿವಾನ್, ಥಾಮ್ ಟಿಲ್ಲಿಸ್ ಮತ್ತಿತರ ಸಂಸದರು ಭಯೋತ್ಪಾದಕರ ದೇಶಕ್ಕೆ ಮನ್ನಣೆ ನೀಡಬಾರದು ಎಂದು ಬೈಡೆನ್ ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ತಾಲಿಬಾನಿಗಳಿಗೆ ಪಾಠ ಕಲಿಸಲು ಮುಂದಾಗಿದ್ದಾರೆ.

ಮಾತ್ರವಲ್ಲ ಅಮೆರಿಕನ್ನರು ಪಾವತಿಸುವ ತೆರಿಗೆ ಹಣದ ಮೂಲಕ ಭಯೋತ್ಪಾದಕ ದೇಶವಾಗಿರುವ ಆಫ್ಘಾನ್‍ಗೆ ಯಾವುದೆ ರೀತಿಯ ಹಣಕಾಸಿನ ನೆರವು ನೀಡಬಾರದು ಎಂದು ಅವರುಗಳು ಆಗ್ರಹಿಸಿದ್ದಾರೆ. ಆಫ್ಘಾನ್‍ನಲ್ಲಿ ತಾಲಿಬಾನ್ ಸರ್ಕಾರ ರಚನೆ ಆಗಿರುವುದು ಹಲವು ರಾಷ್ಟ್ರಗಳ ಭದ್ರತೆಗೆ ಸವಾಲಾಗಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ರುಬಿಯೋ ಹೇಳಿದ್ದಾರೆ.

Facebook Comments