ಆಫ್ಘಾನಿಸ್ತಾನದಲ್ಲಿ ಇನ್ಮುಂದೆ ಗಂಡಸರು ಗಡ್ಡ ಬೋಳಿಸುವಂತಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಕಾಬೂಲ್, ಸೆ.27- ತಾಲಿಬಾನಿಗಳ ಹಿಡಿತದಲ್ಲಿರುವ ಆಫ್ಘಾನಿಸ್ತಾನದಲ್ಲಿ ಇನ್ನೂ ಮುಂದೆ ಗಡ್ಡ ಕೆರೆಯಲು ಅವಕಾಶ ಇಲ್ಲವಾಗಿದೆ. ತಾಲಿಬಾನಿಗಳು ಮೊದಲ ಹಂತದಲ್ಲಿ ಹೆಲ್ಮಾಂಡ್ ಪ್ರಾಂತ್ಯದಲ್ಲಿನ ಸಲೂನ್‍ಗಳಿಗೆ ನೋಟಿಸ್ ನೀಡಿದ್ದು ಇನ್ನೂ ಮುಂದೆ ಗಡ್ಡ ಬೋಳಿಸುವ ಅಥವಾ ಟ್ರಿಮ್ ಮಾಡುವ ಕೆಲಸ ಮಾಡದಂತೆ ತಾಕೀತು ಮಾಡಿದ್ದಾರೆ.

ತಾಲಿಬಾನ್ ಪಡೆಗಳು ಮಫ್ತಿಯಲ್ಲಿ ಅಥವಾ ಗ್ರಾಹಕರ ಸೋಗಿನಲ್ಲಿ ನಿಮ್ಮ ಬಳಿ ಬರಬಹುದು. ಒಂದು ವೇಳೆ ನೀವು ಗಡ್ಡ ಬೋಳಿಸುವ ಅಥವಾ ಟ್ರಿಮ್ ಮಾಡುವ ಸೇವೆಯನ್ನು ಮುಂದುವರೆಸಿದರೆ ಪ್ರತ್ಯೇಕ್ಷವಾಗಿ ಹಿಡಿದು ಶಿಕ್ಷೆಗೆ ಗುರಿ ಪಡಿಸಲಿದ್ದಾರೆ ಎಂದು ಹೇಳಲಾಗಿದೆ.

ಸಲೋನ್ ಮಾಲೀಕರು ಈ ಆದೇಶದ ವಿರುದ್ಧ ಧ್ವನಿ ಎತ್ತಲು ನಮಗೆ ಅವಕಾಶ ಇಲ್ಲ. ಯಾರ ಬಳಿಯೂ ದೂರುವಂತಿಲ್ಲ ಎಂದು ಅಸಹಾಯಕರಾಗಿದ್ದಾರೆ. ಹೆಲ್ಮಾಂಡ್‍ನಲ್ಲಿ ಅಕೃತವಾಗಿ ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗಿದೆ. ರಾಷ್ಟ್ರ ರಾಜಧಾನಿ ಕಾಬೂಲ್ ಸೇರಿದಂತೆ ವಿವಿಧ ಭಾಗಗಳಲ್ಲಿ ಸಲೋನ್ ಮಾಲೀಕರಿಗೆ ಮಕಿಕವಾಗಿ ಎಚ್ಚರಿಕೆ ನೀಡಲಾಗುತ್ತಿದೆ.

ಗಡ್ಡ ಬೋಳಿಸುವುದು ಮತ್ತು ಟ್ರಿಮ್ ಮಾಡುವುದು ಇಸ್ಲಾಂಗೆ ವಿರುದ್ಧವಾಗಿದೆ. ಅಮೆರಿಕಾದ ಸ್ಟೈಲ್ ಅನುಕರಣೆಯನ್ನು ನಿಲ್ಲಿಸಿ, ಇನ್ನೂ ಮುಂದೆ ಯಾರಿಗೂ ಗಡ್ಡ ಟ್ರಿಮ್ ಮಾಡಬೇಡಿ ಎಂದು ತಾಲಿಬಾನ್ ಪಡೆಗಳು ಸೂಚಿಸಿವೆ ಎನ್ನಲಾಗಿದೆ.

ನಿನ್ನ ಅಪಹರಣದ ಪ್ರಕರಣದಲ್ಲಿ ಆರೋಪಿಗಳೆಂದು ಗುರುತಿಸಲಾದ ನಾಲ್ವರನ್ನು ಮೊದಲು ಶೂಟ್ ಮಾಡಿ ನಂತರ ಕ್ರೆನ್ ಮೂಲಕ ಸಾರ್ವಜನಿಕ ಸ್ಥಳದಲ್ಲಿ ನೇಣಿಗೆ ಹಾಕಲಾಗಿತ್ತು. ಇಸ್ಲಾಂ ಅಪಹರಣವನ್ನು ಒಪ್ಪುವುದಿಲ್ಲ. ಇನ್ನೂ ಮುಂದೆ ಆಪರಾಧಗಳಿಗೆ ಕಠಿಣ ಶಿಕ್ಷೆ ವಿಸಲು ಅಗತ್ಯ ಕಾನೂನು ರೂಪಿಸಲಾಗುವುದು. ಈ ಮೊದಲಿಗಿಂತಲೂ ಉತ್ತಮ ಕಾನೂನುಗಳನ್ನು ಈ ಬಾರಿಯ ಆಡಳಿತದಲ್ಲಿ ಜಾರಿಗೆ ತರುತ್ತೇವೆ ಎಂದು ತಾಲಿಬಾನಿಗಳು ಹೇಳಿದ್ದಾರೆ.

ಅಸೋಷಿಯೆಟ್ ಪ್ರೆಸ್‍ನೊಂದಿಗೆ ಸಂದರ್ಶನದಲ್ಲಿ ಮಾತನಾಡಿರುವ ತಾಲಿಬಾನ್ ಮುಖಂಡ ಮುಲ್ಲಾ ನೂರುದ್ಧೀನ್ ತುರಬಿ, ಇಸ್ಲಾಂ ಪ್ರಕಾರ ಶಿಕ್ಷಾ ಪದ್ಧತಿಯನ್ನು ಜಾರಿಗೆ ತರಲಾಗುವುದು. ಪ್ರಮುಖವಾಗಿ ಕೈ ಕತ್ತರಿಸುವ ಶಿಕ್ಷೆ ಭದ್ರತೆಯ ಕಾರಣಕ್ಕೆ ಅತ್ಯಗತ್ಯವಾಗಿದೆ. ಅದರ ಪರಿಣಾಮವೇ ಬೇರೆ ರೀತಿಯಲ್ಲಿರಲಿದೆ. ಶಿಕ್ಷೆಯನ್ನು ಸಾರ್ವಜನಿಕರ ಸಮ್ಮುಖದಲ್ಲಿ ಅಥವಾ ಬಹಿರಂಗ ಪ್ರದೇಶದಲ್ಲಿ ಜಾರಿಗೆ ತರುವ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ಆತ ಹೇಳಿದ್ದಾನೆ.

Facebook Comments