ವೈಮಾನಿಕ ದಾಳಿಯಲ್ಲಿ 30ಕ್ಕೂ ಹೆಚ್ಚು ತಾಲಿಬಾನ್ ಉಗ್ರರು ಖತಂ

ಈ ಸುದ್ದಿಯನ್ನು ಶೇರ್ ಮಾಡಿ

ಕಾಬೂಲ್, ಸೆ.12- ಅಫ್ಘಾನಿಸ್ತಾನದ ಉತ್ತರ ತಖಾರ್ ಪ್ರಾಂತ್ಯದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ 30ಕ್ಕೂ ಹೆಚ್ಚು ತಾಲಿಬಾನ್ ಉಗ್ರರು ಹತರಾಗಿದ್ದಾರೆ.  ಖಚಿತ ಬೇಹುಗಾರಿಕೆ ಮಾಹಿತಿಯ ಮೇರೆಗೆ ಖ್ವಾಜಾ ಬಹಾವುದ್ದೀನ್ ಜಿಲ್ಲೆಯ ಹೊರವಲಯದಲ್ಲಿ ದಾಳಿ ನಡೆಸಲಾಗಿದೆ ಇದರಿಂದ ಸುಮಾರು 30 ಉಗ್ರರು ಮೃತಪಟ್ಟಿದ್ದಾರೆ ಎಂದು ಅಫಘಾನ್ ಸೇನಾ ವಕ್ತಾರ ಅಬ್ದುಲ್ ಖಲೀಲ್ ಖಲೀಲಿ ಕ್ಸಿನ್ಹುವಾಗೆ ತಿಳಿಸಿದ್ದಾರೆ.

ಬಂದೂಕುಗಳು ಮತ್ತು ರಾಕೆಟ್ ಚಾಲಿತ ಗ್ರೆನೇಡ್‍ಗಳೊಂದಿಗೆ ಶಸ್ತ್ರಸಜ್ಜಿತವಾದ ಉಗ್ರರು ಜಿಲ್ಲಾ ಕೇಂದ್ರದ ಮೇಲೆ ಭಾರಿ ದಾಳಿ ನಡೆಸಲು ಪ್ರಯತ್ನಿಸಿದರು ಇದೇ ಸಂದರ್ಭದಲ್ಲಿ ವಾಯುದಾಳಿ ನಡೆಸಲಾಗಿದೆ.

Facebook Comments