ಆಟೋ ಡ್ರೈವರ್ ಒನ್ ವೇ ಲವ್ ಕಹಾನಿ, ಯುವತಿ ಮೇಲೆ ತಲ್ವಾರ್‌ನಿಂದ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಡಿ.21- ಭಗ್ನ ಪ್ರೇಮಿ ಯೊಬ್ಬ ಏಕಾಏಕಿ ಬೆಳ್ಳಂಬೆಳಿಗ್ಗೆ ತಲ್ವಾರ್‌ನಿಂದ ಹಲ್ಲೆ ಯುವತಿ ಮೇಲೆ ಹಲ್ಲೆ ಮಾಡಿರುವ ಘಟನೆ ದೇಶಪಾಂಡೆ ನಗರದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಳಿ ನಡೆ ದಿದೆ. ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡ ಯುವತಿಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಲ್ಲೆ ಮಾಡಿದ ದುಷ್ಕರ್ಮಿಯನ್ನು ಉಪನಗರ ಪೊಲೀಸರು ಬಂಧಿಸಿದ್ದಾರೆ.

ಕುಂದಗೋಳ ತಾಲೂಕಿನ ರಾಮಾಪುರದ ಆಟೋ ಚಾಲಕ ಇಸ್ಮಾಯಿಲ್ ಎಂಬಾತ ಕಳೆದ ಕೆಲ ದಿನಗಳಿಂದ ಆಯುಷಾಳನ್ನು ಪ್ರೀತಿ ಮಾಡುತ್ತಿದ್ದು ಆಕೆ ಪ್ರೀತಿ ಮಾಡಲು ನಿರಾಕರಿಸಿದ್ದರಿಂದ ಆಕೆಯ ಮೇಲೆ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಹುಬ್ಬಳ್ಳಿಯ ದೇಶಪಾಂಡೆನಗರ ದಲ್ಲಿನ ತಾಯಿಯೊಂದಿಗೆ ವಾಸ ವಿರುವ ಯುವತಿ ನಗರದ ಪ್ರತಿಷ್ಠಿತ ಗೋಲ್ಡ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಳೆ.

ಈತ ಮನೆಯವರು ಕೊಡಿಸಿದ ಆಟೋವನ್ನು ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ಆಯುಷಾ ಕೆಲ ದಿನಗಳಿಂದ ತನ್ನ ಮೂಲತಃ ಊರು ಮೊರಬಕ್ಕೆ ಹೋಗಿದ್ದಳು ಎನ್ನಲಾಗಿದೆ. ಪದೇ ಪದೇ ಈತ ಪ್ರೀತ್ಸೆ..ಪ್ರೀತ್ಸೆ ಅಂತಾ ಕಾಡಿಸುತ್ತಿದ್ದ. ಈಗ ಮತ್ತೆ ಯುವತಿ ಹುಬ್ಬಳ್ಳಿಗೆ ಬಂದ ನಂತರ ಅದೇ ರಾಗಾ ಹಾಡಿದ್ದ. ಇದರಿಂದ ಬೇಸತ್ತು ಹೋಗಿದ್ದ ಯುವತಿ ಇಸ್ಮಾಯಿಲ್‍ನನ್ನು ಭೇಟಿಯಾಗಲು ನಿರಾಕರಿಸಿದ್ದರಿಂದ ಕುಪಿತಗೊಂಡ ಪಾಗಲ್ ಪ್ರೇಮಿ ತಲ್ವಾರ್‍ನಿಂದ ಹಲ್ಲೆ ನಡೆಸಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments