ತಮಿಳುನಾಡಿನ 20 ಬೆಸ್ತರನ್ನು ಬಂಧಿಸಿದ ಲಂಕಾ ನೌಕಾ ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

20 fishermenರಾಮೇಶ್ವರಂ, ಜ.14- ಭಾರತ- ಶ್ರೀಲಂಕಾ ಜಲ ಗಡಿ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡಿನ 20 ಬೆಸ್ತರನ್ನು ನಿನ್ನೆ  ಬೆಳಗ್ಗೆ ಲಂಕಾ ನೌಕಾ ಪಡೆ ಬಂಧಿಸಿದೆ. ನೆಡುಂತಿವು ಎಂಬಲ್ಲಿ ತಮಿಳುನಾಡಿನ ಬೆಸ್ತರು ಮೀನುಗಾರಿಕೆಯಲ್ಲಿ ತೊಡಗಿದ್ದಾಗ ಅವರನ್ನು ಸುತ್ತುವರೆದ ಶ್ರೀಲಂಕಾ ಕರಾವಳಿ ರಕ್ಷಣಾ ಪಡೆ ಮೀನುಗಾರರನ್ನು ಬಂಧಿಸಿತು.

ಬಂಧಿತರಲ್ಲಿ 11 ಮಂದಿ ಪುದುಕೋಟೈ ಮೀನುಗಾರರು ಉಳಿದ 9 ಮಂದಿ ಜಗತಾಪಟ್ಟಣಂ ಪ್ರದೇಶಕ್ಕೆ ಸೇರಿದವರು. ದೋಣಿಗಳನ್ನು ವಶಪಡಿಸಿ ಕೊಂಡಿರುವ ಸಿಬ್ಬಂದಿ ಬಂಧಿತರನ್ನು ಶ್ರೀಲಂಕಾದ ಕರೈ ನಗರ್‍ಗೆ ವಿಚಾರಣೆಗೆ ಒಳಪಡಿಸಿದ್ದಾರೆ. ನಡಂತಿವು ಮತ್ತು ಕಚ್ಚತಿವು ಜಲ ಪ್ರದೇಶದಲ್ಲಿ ತಮಿಳುನಾಡು ಮೀನುಗಾರರು ಮತ್ತು ಶ್ರೀಲಂಕಾ ನೌಕಾಪಡೆ ನಡುವೆ ಘರ್ಷಣೆ ಮರು ಕಳಿಸುತ್ತಿದೆ.

Facebook Comments