ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ : ತಮಿಳುನಾಡಿಗೆ ತಲೆಬಾಗಿದ ಕರ್ನಾಟಕ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ನ. 22- ತಮಿಳುನಾಡಿನ ಸೋಟಕ ಆಟಗಾರ ಶಾರುಖ್‍ಖಾನ್ ಪಂದ್ಯದ ಕೊನೆಯ ಎಸೆತದಲ್ಲಿ ಪ್ರತೀಕ್ ಜೈನ್‍ರ ಎಸೆತವನ್ನು ಸಿಕ್ಸರ್ ಗೆ ಅಟ್ಟುವ ಮೂಲಕ ತಮಿಳುನಾಡಿಗೆ ಸಯ್ಯದ್ ಮುಷ್ತಾಕ್ ಟ್ರೋಫಿ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕ ನೀಡಿದ 151 ರನ್‍ಗಳ ಗುರಿ ಬೆನ್ನಟ್ಟಿದ ವಿಜಯ್‍ಶಂಕರ್ ನಾಯಕತ್ವದ ತಮಿಳುನಾಡು ತಂಡವು ಆರಂಭಿಕ ಆಟಗಾರ ನಾರಾಯಣ ಜಗದೀಶನ್ (41 ರನ್, 2 ಬೌಂಡರಿ, 1 ಸಿಕ್ಸರ್) ಹಾಗೂ ಶಾರುಖ್‍ಖಾನ್ (33ರನ್, 1 ಬೌಂಡರಿ, 1 ಸಿಕ್ಸರ್) ರೋಚಕ ಆಟದಿಂದ 20 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 153 ರನ್ ಗಳಿಸಿತು.

ಕರ್ನಾಟಕ ಪರ ಕೆ.ಸಿ.ಕಾರ್ಯಪ್ಪ 2 ವಿಕೆಟ್, ಪ್ರತೀಕ್ ಜೈನ್, ವಿದ್ಯಾಧರ್ ಪಟೇಲ್, ಕರುಣ್‍ನಾಯರ್ ತಲಾ 1 ವಿಕೆಟ್ ಕೆಡವಿದರು.

ಇದಕ್ಕೂ ಮುನ್ನ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ಅಭಿನವ್ ಮನೋಹರ್(46ರನ್, 4 ಬೌಂಡರಿ, 2 ಸಿಕ್ಸರ್) ಹಾಗೂ ಪ್ರವೀಣ್ ದುಬೆ (33 ರನ್, 3 ಬೌಂಡರಿ, 1 ಸಿಕ್ಸರ್) ನೆರವಿನಿಂದ ನಿಗತ 20 ಓವರ್‍ಗಳಲ್ಲಿ 7 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತು.

ತಮಿಳುನಾಡು ಪರ ರವಿಶ್ರೀನಿವಾಸ್ ಸಾಯಿಕಿಶೋರ್ 3 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಆದರೆ, ಸಂದೀಪ್ ವಾರಿಯರ್, ಸಂಜಯ್ ಯಾದವ್, ಟಿ.ನಟರಾಜನ್ ತಲಾ 1 ವಿಕೆಟ್ ಕಬಳಿಸಿದರು.

Facebook Comments