ಕಳ್ಳದಾರಿಯಲ್ಲಿ ಎಂಟ್ರಿ ಕೊಡುತ್ತಿರುವ ತಮಿಳಿಗರಿಂದಲೇ ಬೆಂಗಳೂರಿಗೆ ಕಂಟಕ…!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 22- ತಮಿಳುನಾಡಿನಿಂದ ತಲೆಮರೆಸಿಕೊಂಡು ಬರುತ್ತಿರುವವರೇ ನಗರಕ್ಕೆ ಕಂಟಕರಾಗುತ್ತಿದ್ದಾರೆ.ತಮಿಳುನಾಡಿನಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದರಿಂದ ರಾಜ್ಯದ ಗಡಿ ಭಾಗದಿಂದ ಅತ್ತಿಬೆಲೆ ಸಮೀಪದ ಕಳ್ಳದಾರಿಯಲ್ಲಿ ನೂರಾರು ತಮಿಳಿಗರು ನಗರಕ್ಕೆ ಆಗಮಿಸುತ್ತಿದ್ದಾರೆ.

ಆನೇಕಲ್ ಗಡಿಯ ಬಳ್ಳೂರು ಗ್ರಾಮದ ಸರ್ವೆ ತೋಪುಗಳ ಮೂಲಕ ನೂರಾರು ತಮಿಳಿಗರು ನಗರಕ್ಕೆ ಬರುತ್ತಿದ್ದರೂ ಅವರನ್ನು ಯಾರೂ ತಡೆಹಿಡಿಯುತ್ತಿಲ್ಲ. ಗಡಿ ಗ್ರಾಮಗಳಲ್ಲಿ ಅನಾಮದೇಯರು ಪ್ರವೇಶಿಸಬಾರದು ಎಂದು ತಡೆಗೋಡೆ ನಿರ್ಮಿಸಿದ್ದರೂ ಅವುಗಳನ್ನು ಕಿತ್ತು ಹಾಕಿ ಗುಂಪು ಗುಂಪಾಗಿ ತಮಿಳುನಾಡಿನ ನೂರಾರು ಮಂದಿ ಬೆಂಗಳೂರಿಗೆ ಅಕ್ರಮ ಪ್ರವೇಶ ಪಡೆಯುತ್ತಿದ್ದಾರೆ.

ಅತ್ತಿಬೆಲೆ ಚೆಕ್‍ ಪೋಸ್ಟ್ ಮೂಲಕ ಆಗಮಿಸಿದರೆ ಗಡಿಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಬೇಕಾಗುತ್ತದೆ ಎಂಬ ಆತಂಕದಿಂದ ತಮಿಳಿಗರು ಅಡ್ಡದಾರಿ ಹಿಡಿದಿದ್ದಾರೆ.

ಟ್ರ್ಯಾಕ್ಟರ್, ಬೈಕ್ ಮತ್ತಿತರ ವಾಹನಗಳಲ್ಲಿ ತಮಿಳುನಾಡಿನ ನೂರಾರು ಮಂದಿ ಅಕ್ರಮ ಪ್ರವೇಶ ಪಡೆಯುತ್ತಿದ್ದು, ಅಂತಹವರನ್ನು ಪತ್ತೆಹಚ್ಚಿ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಬಳ್ಳೂರು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Facebook Comments

Sri Raghav

Admin