ತಾಂಡವ್ ವೆಬ್ ಸೀರೀಸ್ ನಿಷೇಧಕ್ಕೆ ಹೆಚ್ಚಿದ ಒತ್ತಾಯ, ನಿರ್ದೇಶಕರಿಂದ ಕ್ಷಮೆ ಯಾಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜ.19- ಹಿಂದೂ ದೇವತೆಗಳ ಅಪಹಾಸ್ಯ ಮಾಡಿರುವ ರಾಜಕೀಯ ಡ್ರಾಮಾ ವೆಬ್ ಸೀರೀಸ್ ತಾಂಡವ್ ಪ್ರದರ್ಶನವನ್ನು ಸಾರ್ವಜನಿಕರು ಬಹಿಷ್ಕರಿಸುವಂತೆ ಮಹಾರಾಷ್ಟ್ರ ಬಿಜೆಪಿ ಶಾಸಕ ರಾಮ್ ಕದಂ ಒತ್ತಾಯಿಸಿದರು. ಇತ್ತೀಚೆಗೆ ಅಮೆಜಾನ್ ಪ್ರೈಂ ವಿಡೀಯೋದಲ್ಲಿ ಪ್ರದರ್ಶನಗೊಳ್ಳುತ್ತಿರುವ ತಾಂಡವ್ ವೆಬ್ ಸರಣಿಯಲ್ಲಿ ಬಾಲಿವುಡ್ ಪ್ರಮುಖ ನಟ, ನಟಿಯರ ಅಭಿನಯಿಸಿದ್ದಾರೆ. ಇಂತಹ ಅದ್ಧೂರಿ ಸರಣಿಯಲ್ಲಿ ಹಿಂದು ದೇವತೆಗಳನ್ನು ಹೀಯಾಳಿಸಲಾಗಿದೆ.

ತಾಂಡವ್ ಸರಣಿ ಆರಂಭವಾಗಿ ಎರಡು ದಿನಗಳಾಗಿವೆ ಇದುವರೆಗೆ ಅಮೆಜಾನ್‍ನಿಂದ ಯಾವುದೇ ಕ್ಷಮೆ ಯಾಚನೆ ಸುದ್ದಿ ಬಂದಿಲ್ಲ. ಹಿಂದೂ ದೇವರನ್ನು ಅಪಹಾಸ್ಯ ಮಾಡುವ ಅಥವಾ ಗುರಿಯಾಗಿಸುವ ಅವರ ಕೀಳರಿಮೆ ಕೃತ್ಯದ ಬಗ್ಗೆ ಹೆಮ್ಮೆ ಪಡುತ್ತಾರೆ. ಅವರಿಗೆ ಈ ಬಗ್ಗೆ ಕಿಂಚಿತ್ತು ವಿಷಾದವಿಲ್ಲ ಎಂದು ಕಾಣುತ್ತದೆ. ಆದ್ದರಿಂದ ಭಾರತೀಯ ಎಲ್ಲ ಹಿಂದುಗಳು ಅಮೆಜಾನ್ ಪ್ರೈಂ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಕೇಳಿಕೊಳ್ಳುತ್ತೇನೆ ಎಂದರು.

ತಾಂಡವ್ ಸರಣಿಯಲ್ಲಿ ಸೈಫ್ ಅಲಿಖಾನ್, ಡಿಂಪಲ್ ಕಪಾಡಿಯಾ, ಸುನಿಲ್ ಗ್ರೋವರ್, ಟಿಗ್ಮಾಂಶು ಧುಲಿಯ, ಡಿನೊ ಮಾರಿಯ, ಕುಮುದ್ ಮಿಶ್ರ, ಮೊ. ಜೀಷನ್ ಅಯ್ಯುಬ್, ಗೌಹರ್ ಖಾನ್ ಹಾಗೂ ಕೃತಿಕ ಕಾಮ್ರಾ ಇತರ ತಾರಾಗಣವಿದೆ.

# ಬಿಜೆಪಿ ಮೋರ್ಚಾ:

ತಾಂಡವ್ ಸರಣಿ ತಡೆ ಕೋರಿ ಶಾಸಕ ರಾಮ್ ಕದಂ ನೇತೃತ್ವದಲ್ಲಿ ಅಮೆಜಾನ್ ಕೇಂದ್ರ ಕಚೇರಿಯವರೆಗೆ ಬೃಹತ್ ಮೋರ್ಚಾ ಹಮ್ಮಿಕೊಳ್ಳಲಾಗಿತ್ತು. ಅಮೆಜಾನ್ ಕಚೇರಿಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದರು. ಕದಂ ಅವರು ಈ ಬಗ್ಗೆ ಘಾಟೊಪರ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು.  ಪ್ರಕರಣ ದಾಖಲು: ತಾಂಡವ್ ಸರಣಿ ನಿರ್ದೇಶಕ ಬರೆದಿರುವ ಅಲಿ ಅಬ್ಬಾಸ್ ಜಾಫರ್ ಹಾಗೂ ಚಿತ್ರಕಥೆ ಬರೆದಿರುವ ಗೌರವ್ ಸೋಲಂಕಿ ವಿರುದ್ಧ ಲಕ್ನೋ ಹಜ್ರತ್‍ಗಂಜ್ ಪೊಲೀಸ್ ಠಾಣೆಯಲ್ಲಿ ಕಳೆದ ರಾತ್ರಿ ದೂರು ದಾಖಲಾಗಿದೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಮೆಜಾನ್ ಪ್ರೈಂ ವಿಡಿಯೋ ಅಧಿಕಾರಿಗಳಿಗೆ ವಿವರಣೆ ಕೋರಿ ಪತ್ರ ಬರೆದಿದ್ದಾರೆ.

ತಾಂಡವ್ ತಂಡದಿಂದ ಕ್ಷಮಾಪಣೆ: ವೆಬ್ ಸೀರೀಸ್ ತಾಂಡವ್ ತಂಡ, ಉದ್ದೇಶಪೂರ್ವಕವಾಗಿ ಹಿಂದೂ ದೇವತೆಗಳ ಅಪಮಾನ, ಅಪಹಾಸ್ಯ ಮಾಡಿಲ್ಲ. ಅಲ್ಲದೆ, ಯಾವುದೇ ಕೀಳರಿಮೆ ತೋರಿಲ್ಲ. ಚಿತ್ರದ ಸನ್ನಿವೇಶಕ್ಕೆ ತಕ್ಕಂತೆ ಮೂಡಿಬಂದಿದೆ. ಆದರೂ, ಆದ ಅಪರಾಧಕ್ಕೆ ನಾವು ಬೇಷರತ್ತಾಗಿ ಕ್ಷಮೆಯಾಚಿಸುತ್ತೇವೆ. ಸರಣಿ ಪ್ರದರ್ಶನ ನಂತರ ಜನರ ಭಾವನೆಗಳು, ಹಿಂದೂ ದೇವತೆಗಳ ಚಿತ್ರಣಕ್ಕಾಗಿ ವಿವಾದ ಹುಟ್ಟುಹಾಕಿದೆ. ಹಿಂದುಗಳ ಭಾವನೆಗೆ ಧಕ್ಕೆ ತರುವ ಯಾವುದೇ ಉದ್ದೇಶ ನಮ್ಮ ತಂಡಕ್ಕಿಲ್ಲ ಎಂದಿದೆ.

ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಟ್ವೀಟ್ ಮಾಡಿ, ತಾಂಡವ್ ಪಾತ್ರವರ್ಗ ಮತ್ತು ಸಿಬ್ಬಂದಿಯಿಂದ ಅಧಿಕೃತ ಹಾಗೂ ಪ್ರಾಮಾಣಿಕ ಕ್ಷಮೆಯಾಚನೆ ಮಾಡುತ್ತಿದ್ದೇವೆ. ತಂಡವು ಸರಣಿ ವೀಕ್ಷಕರ ಪ್ರತಿಕ್ರಿಯೆಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸುತ್ತಿದೆ ಎಂದರು. ಒಟಿಟಿ ಪ್ಲಾಟ್‍ಫಾರಂ ವೀಕ್ಷಕರಲ್ಲೂ ಕ್ಷಮೆಯಾಚಿಸಿದ್ದಾರೆ.

Facebook Comments