ಟ್ಯಾಂಕರ್ ಪಲ್ಟಿಯಾಗಿ ಮಣ್ಣುಪಾಲಾಯ್ತು ಪೆಟ್ರೋಲ್, ಡೀಸೆಲ್..!

ಈ ಸುದ್ದಿಯನ್ನು ಶೇರ್ ಮಾಡಿ

ಹನೂರು, ಜು.14- ಹಿಂದೆ ಬರುತ್ತಿದ್ದ ಟಾಟಾ ಇಂಡಿಕಾ ಕಾರಿಗೆ ದಾರಿ ಬಿಡಲು ಹೋಗಿ ರಸ್ತೆ ಬದಿಗೆ ಇಳಿದ ಪೆಟ್ರೋಲ್ ಮತ್ತು ಡೀಸೆಲ್ ಟ್ಯಾಂಕರ್ ಲಾರಿ ಮರಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದಿರುವ ಘಟನೆ ಇಂದು ಮುಂಜಾನೆ ಆಂಡಿಪಾಳ್ಯ ಗ್ರಾಮದಲ್ಲಿ ಜರುಗಿದೆ.

ಹನೂರು ತಾಲ್ಲೂಕು ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಬೂದಿಪಡಗ ಗ್ರಾಮದ ಸಮೀಪ ಆಂಡಿಪಾಳ್ಯ ಬಳಿ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ, ಆದರೆ ಪೆಟ್ರೋಲ್, ಡೀಸೆಲ್ ಮಣ್ಣು ಪಾಲಾಗಿದೆ.

ಬೆಂಗಳೂರಿನಿಂದ ಲೊಕ್ಕನಹಳ್ಳಿ ಮಾರ್ಗವಾಗಿ ಒಡೆಯರ್ ಪಾಳ್ಯ ಪೆಟ್ರೋಲ್ ಬಂಕ್‍ಗೆ ಪೆಟ್ರೋಲ್ ಮತ್ತು ಡೀಸೆಲ್ ಕೊಂಡೊಯ್ಯುತ್ತಿದಾಗ ಈ ಘಟನೆ ನಡೆದಿದೆ.
ಡಿಕ್ಕಿಯ ರಭಸಕ್ಕೆ ಮರ ಕೂಡ ನೆಲಕ್ಕುರುಳಿದೆ . ಮತ್ತು ವಾಹನದ ಟ್ಯಾಂಕ್ ಒಡೆದು ಹೋಗಿದ್ದು ಪೆಟ್ರೋಲ್ ಮತ್ತು ಡೀಸಲ್ ಮಣ್ಣು ಪಾಲಾಗಿದೆ. ಅದೃಷ್ಟವಶಾತ್‍ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸುದ್ದಿ ತಿಳಿದ ತಕ್ಷಣ ಹನೂರು ಅಗ್ನಿ ಶಾಮಕ ದಳದ ಸಿಬ್ಬಂದಿ ಫೈರ್ ಲೀಡರ್ ಜೈ ಶಂಕರ್, ಫೈರ್‍ಮ್ಯಾನ್ ನಾಗೇಶ್, ಚಾಲಕ ಶೇಖರ್ ಹಾಗೂ ಗೃಹ ರಕ್ಷಕದಳದ ನಾಗರಾಜು ಸ್ಥಳಕ್ಕೆ ಧಾವಿಸಿ ಧೂಮಪಾನ ಮಾಡುವ ಸಾರ್ವಜನಿಕರನ್ನು ಹತ್ತಿರಕ್ಕೆ ಬಾರದಂತೆ ನೋಡಿಕೊಂಡರು ನಂತರ ಟ್ಯಾಂಕರ್ ಲಾರಿಯನ್ನು ಮೇಲೆತ್ತಲಾಯಿತು.

Facebook Comments