ಇಂದಿನ ರಾಶಿ ಭವಿಷ್ಯ (09-07-2020- ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

# ಮೇಷ :
ಆಕಸ್ಮಿಕ ರೀತಿಯಲ್ಲಿ ನಿರೀಕ್ಷಿತ ಕೆಲಸ- ಕಾರ್ಯಗಳು ನಡೆಯಲಿವೆ, ಮಕ್ಕಳಿಂದ ನೆಮ್ಮದಿ ಇರುತ್ತದೆ, ಕುಟುಂಬದಲ್ಲಿ ಆಗಾಗ ಕಲಹ ಕಂಡುಬರುತ್ತದೆ, ಮಾತೃ ವರ್ಗದವರಿಗೆ ತೊಂದರೆ ಎದುರಾಗಲಿದೆ

# ವೃಷಭ :
ಗೃಹದಲ್ಲಿ ಮದುವೆ-ಮುಂಜಿ ಮುಂತಾದ ಕಾರ್ಯಗಳು ನಡೆಯಲಿವೆ, ಶುಭವಾರ್ತೆ ಕೇಳುವಿರಿ, ಶತ್ರುಗಳಿಂದ ತೊಂದರೆ ಆಗಬಹುದು, ಮಾನಸಿಕ ಚಿಂತೆ ಇರುವುದು

# ಮಿಥುನ:
ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಬೇಕು, ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ ಕಳೆದು ಕೊಳ್ಳುವರು, ಮನಸ್ಸಿಗೆ ನೆಮ್ಮದಿ ಇರುವುದಿಲ್ಲ, ಕಣ್ಣಿನ ತೊಂದರೆ ಕಂಡುಬರುವುದು

# ಕಟಕ :
ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿ, ಅಭಿವೃದ್ಧಿಗೆ ತೊಂದರೆಯಾಗುತ್ತದೆ, ಸಿಟ್ಟು ಬಹುಬೇಗ ಬರುತ್ತದೆ, ಅಧಿಕಾರಿಗಳಿಂದ ತೊಂದರೆ, ಅನ್ಯರ ಕೈಯಲ್ಲಿ ಶುಭ ಕಾರ್ಯಗಳನ್ನು ಮಾಡಿಸುವಿರಿ, ಪಾರಾಯಣ ಮಾಡುವಿರಿ

# ಸಿಂಹ:
ವ್ಯಾಪಾರ-ವ್ಯವಹಾರಗಳು ಉತ್ತಮ ರೀತಿಯಲ್ಲಿ ನಡೆಯಲಿವೆ, ಸ್ನೇಹಿತರಿಂದ ಲಾಭ ವಿದೆ, ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ, ಹೊಂದಾಣಿಕೆಯ ಮನೋಭಾವ ಹೊಂದಿರುವಿರಿ

# ಕನ್ಯಾ:
ಹಿರಿಯ ಅಧಿಕಾರಿಗಳಿಗೆ ಆಕಸ್ಮಿಕ ವರ್ಗಾವಣೆ ಸಾಧ್ಯತೆ, ಹಳೆಯ ವ್ಯಾಧಿಯಿಂದ ಗುಣಮುಖರಾಗುವಿರಿ, ಆಕರ್ಷಣೆಗಳಿಗೆ ಮನಸ್ಸು ವಿಚಲಿತವಾಗುವುದಿಲ್ಲ

# ತುಲಾ:
ನೂತನ ಮಾರ್ಗಗಳು ಆದಾಯಕ್ಕೆ ಪೂರಕವಾಗಲಿವೆ. ಪತ್ನಿಯ ಆರೋಗ್ಯ ವಿಷಮ ಸ್ಥಿತಿಗೆ ತಲುಪಬಹುದು, ಎದುರಾಗುವ ಸಮಸ್ಯೆಗಳನ್ನು ಪ್ರೀತಿ-ವಿಶ್ವಾಸ ಗಳಿಂದ ಪರಿಹರಿಸಿಕೊಳ್ಳುವಿರಿ

# ವೃಶ್ಚಿಕ :
ನಿರುದ್ಯೋಗಿಗಳಿಗೆ ಹಲ ವಾರು ಅವಕಾಶಗಳು ಬರಲಿವೆ, ಬಂಧು-ಬಾಂಧವರ ಹತ್ತಿರ ಹಣದ ವ್ಯವಹಾರ ಮಾಡುವಾಗ ಎಚ್ಚರದಿಂದಿರಿ, ತಾಳ್ಮೆ-ಸಮಾಧಾನವಿರುವುದರಿಂದ ಸಂದಿಗ್ಧ ಪರಿಸ್ಥಿತಿಗೆ ನೂಕಲ್ಪಡುವುದಿಲ್ಲ

# ಧನುಸ್ಸು:
ರಾಜಕೀಯ ವರ್ಗದವರಿಗೆ ಸೂಕ್ತ ಸ್ಥಾನಮಾನ, ಗೌರವ ಸಿಗಲಿದೆ, ದೇವತಾ ಕಾರ್ಯಗಳು ನಡೆಯಲಿವೆ, ಹಣಕಾಸು ವಿಚಾರದಲ್ಲಿ ಕೊರತೆ ಕಂಡು ಬಂದು ಹೆಚ್ಚು ಚಿಂತೆಗೀಡಾಗುವ ಸಾಧ್ಯತೆ ಇದೆ, ಸಹೋದ್ಯೋಗಿಗ ಳೊಡನೆ ಸ್ನೇಹದಿಂದಿರುವಿರಿ

# ಮಕರ:
ಆಕಸ್ಮಿಕ ಧನಲಾಭ, ಭೂ ಸಂಬಂಧ ಶುಭ ವಾರ್ತೆ ಬರುವುದು, ವಿದ್ಯಾರ್ಥಿಗಳಿಗೆ ಉತ್ತಮ ದಿನ, ಸಜ್ಜನರ ಸಹವಾಸ ಮಾಡುವಿರಿ, ನ್ಯಾಯಾಲಯದ ಕೆಲಸ-ಕಾರ್ಯಗಳು ನಿಮ್ಮ ಪರವಾಗಿ ಮುಂದುವರಿಯಲಿವೆ

# ಕುಂಭ:
ಮಡದಿಯ ಮುನಿಸು ಧನವ್ಯಯಕ್ಕೆ ಕಾರಣವಾಗಲಿದೆ, ರಾಜಕೀಯ ಕ್ಷೇತ್ರದಲ್ಲಿರುವವರು ಪ್ರಗತಿ ಸಾಧಿಸಬಹುದು, ವಕೀಲರಿಗೆ ಉತ್ತಮ ದಿನ, ಧನ ಸಂಗ್ರಹಕ್ಕೆ ನಾನಾ ರೀತಿಯಲ್ಲಿ ಮಾರ್ಗಗಳು ತೋರಿ ಬರಲಿವೆ, ಉತ್ತಮ ದಿನ

# ಮೀನ:
ಪಾಲು ಬಂಡವಾಳದಲ್ಲಿ ವಂಚನೆ ಸಾಧ್ಯತೆ, ಮನೆಯಲ್ಲಿ ಚೋರ ಬಾಧೆಯ ಭೀತಿ ಕಾಡಲಿದೆ, ಹಿರಿಯರ ಮಾತಿಗೆ ಮನ್ನಣೆ ನೀಡಿ, ಖರ್ಚುಗಳು ಅಧಿಕವಾಗಿದ್ದರೂ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ, ದೂರ ಪ್ರಯಾಣ

Facebook Comments

Sri Raghav

Admin