ಟಿಎಪಿಎಂಎಸ್ ಚುನಾವಣೆ : ಸ್ವಾಭಿಮಾನಿ ಕಾಂಗ್ರೆಸ್ ಜಯಬೇರಿ, ಬಿಜೆಪಿಗೆ ಮುಖಭಂಗ

ಈ ಸುದ್ದಿಯನ್ನು ಶೇರ್ ಮಾಡಿ

ಹೊಸಕೋಟೆ, ಅ.19- ತಾಲ್ಲೂಕಿನ ವ್ಯವಸಾಯೋತ್ಪನ್ನ ಸಹಕಾರ ಸಂಘ ಟಿಎಪಿಎಂಎಸ್ ಚುನಾವಣೆಯಲ್ಲಿ ಶಾಸಕ ಶರತ್ ಬಚ್ಚೇಗೌಡರ ನೇತೃತ್ವದ ಸ್ವಾಭಿಮಾನಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಜಯಬೇರಿ ಬಾರಿಸಿ 11 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿಗೆ ಮುಖಭಂಗ ಅನುಭವಿಸಿದೆ. ಕಣದಲ್ಲಿದ್ದ 13 ಅಭಯರ್ಥಿಗಳಲ್ಲಿ 11 ಅಭ್ಯರ್ಥಿಗಳು ಚುನಾವಣೆಯಲ್ಲಿ ವಿಜಯಶಲಿಗಳಗಿದ್ದಾರೆ.

ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡಿದ್ದು, ಅಚ್ಚರಿಯ ವಿದ್ಯಮಾನದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಸ್ವಾಭಿಮಾನಿ ಪಕ್ಷಕ್ಕೆಬೆಂಬಲ ನೀಡಿ ಬಿಜೆಪಿ ಸಂಪೂರ್ಣ ಸೋಲಪ್ಪಲು ಕಾರಣವಾಗಿದೆ.  ಚುನಾವಣೆಯಲ್ಲಿ ಅಕ್ರಮ ಆರೋಪ ಮಾಡಿ ಬಿಜೆಪಿ ಚುನಾವಣೆಯನ್ನು ಬಹಿಷ್ಕರಿಸಿ ಮಿನಿವಿಧಾನಸೌಧ ಮುಂದೆ ಅಂಬೇಡ್ಕರ್ ಪ್ರತಿಮೆ ಬಳಿ ನಡೆಸಿದ ಬಿಜೆಪಿ ಕಾರ್ಯಕರ್ತರುಗಳು ಚುನಾವಣೆಯನ್ನು ಮುಂದುಡುವಂತೆ ಮತ್ತು ಅಕ್ರಮ ಕಾರ್ಡುಗಳನ್ನು ತಡೆಯಿಡಿಯುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದು ನಾವು ಚುನಾವಣೆಯನ್ನು ಬಹಿಷ್ಕರಿಸಲು ಕಾರಣ ಎಂದು ಟೌನ್ ಬಿಜೆಪಿ ಅಧ್ಯಕ್ಷ ಸಿ.ಜಯರಾಜ್ ಮತ್ತು ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ.ಸತೀಶ್ ಹೇಳಿದ್ದಾರೆ.

ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಕೆ.ಕೃಷ್ಣಮೂರ್ತಿ ಹಾಗೂ ಎಂ.ಭತ್ಯಪ್ಪ ಅವಿರೋಧವಾಗಿ ಆಯ್ಕೆಗೊಂಡಿದ್ದರೆ.  ಗೆದ್ದ ಎಲ್ಲಾ ಅಭ್ಯರ್ಥಿಗಳನ್ನು ಶಾಸಕ ಶರತ್ ಬಚ್ಚೇಗೌಡ ಅಭಿನಂದಿಸಿ ಮಾತನಾಡಿ, ಇದು ನವರಾತ್ರಿ ಸಂದರ್ಭದಲ್ಲಿ ನಡೆದ ಚುನಾವಣೆಯಲ್ಲಿ ಟಿಎಪಿಎಂಎಸ್ ಆಡಳಿತ 11ಕ್ಕೆ 11 ಅಭ್ಯರ್ಥಿಗಳಿಗೆ ತಾಲ್ಲೂಕಿನ ಷೇರುದಾರರು ಮತ ನೀಡಿದ್ದು ಅವರಿಗೂ ಕೃತಜ್ಞಾತೆ ಸಲ್ಲಿಸುತ್ತೇನೆ.

ಇದು ಮುಂದಿನ ದಿನಗಳಲ್ಲಿ ಶುಭ ಸೂಚನೆ ಮುಂದಿನ ದಿನಗಳಲ್ಲಿ ನಡೆಯುವ ಗ್ರಾಮ ಪಂಚಾಯ್ತಿಗಳಿಗೆ ಗೆಲ್ಲುವ ಅವಕಾಶ ಜನರು ನೀಡಿದ್ದಾರೆ. ಈ ಚುನಾವಣೆ ಸ್ವಾಭಿಮಾನಿ ಕಾಂಗ್ರೆಸ್ ಪಕ್ಷದ ಗೆಲುವು ಸಹಕಾರದಿಂದ ಅಭೂತಪೂರ್ವ ಜಯ ಎಂದು ಹೇಳಿದರು.

ಸಂಸದ ಬಿ.ಎನ್ ಬಚ್ಚೇಗೌಡ ಮಾತನಾಡಿ, ನನ್ನ ಮಗ ಶರತ್ ಬಚ್ಚೇಗೌಡ ತನ್ನ ರಾಜಕೀಯ ಕ್ಷೇತ್ರದಲ್ಲಿ ಭದ್ರ ಬುನಾದಿಗೆ ರಾಷ್ಟ್ರೀಯಾ ಪಕ್ಷದ ಸಹಕಾರ ಬೇಕಿದೆ ಸ್ವಾಭಿಮಾನಿಯಾಗಿ ಗೆದ್ದರು ಪಕ್ಷವೂಂದರ ಜತೆ ಗುರ್ತಿಸಿಕೊಳ್ಳುವ ಅನಿವಾರ್ಯತೆ ಇದೆ. ಆತ ಬಿಜೆಪಿ ಪಕ್ಷಕ್ಕೆಮರಳಲು ನಡೆಸಿದ ಪ್ರಯತ್ನ ಬಿಜೆಪಿ ಪಕ್ಷದಲ್ಲಿ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ ಸಾಮಾನ್ಯವಾಗಿ ಕಾಂಗ್ರೆಸ್ ಸೇರಲು ತೀರ್ಮಾನ ಮಾಡಿದ್ದಾರೆ ಎಂದರು.

Facebook Comments