ರೈತರ ಬಾಳು ಬೆಳಗಿಸಿದ ತರಳಬಾಳು ಜಗದ್ಗುರುಗಳು

ಈ ಸುದ್ದಿಯನ್ನು ಶೇರ್ ಮಾಡಿ

ನಾಡಿನ ಅನ್ನದಾತರಿಗೆ ಚೈತನ್ಯ ತುಂಬಿ ಅವರ ಬದುಕು ಹಸನಾಗಿಸುವಲ್ಲಿ ಸಿರಿಗೆರೆಯ ತರಳಬಾಳು ಜಗದ್ಗುರುಗಳ ಜನ್ಮದಿನೋತ್ಸವದ ನಿಮಿತ್ತ ಅವರ ಸಾಧನೆಯ ಹಾದಿಗಳನ್ನು ಸ್ಮರಿಸಲಾಗುತ್ತಿದೆ. ಜಗದ್ಗುರುಗಳಾದ ನಂತರ ತಮ್ಮ ಜೀವನವನ್ನೇ ರೈತರರ ಬದುಕು ಹಸನುಗೊಳಿಸುವುದಕ್ಕಾಗಿ ಮುಡುಪಾಗಿಟ್ಟ ಶ್ರೀಗಳು ನಿರಂತರವಾಗಿ ರೈತ ಕಾಯಕದಲ್ಲಿ ತೊಡಗಿಸಿಕೊಂಡು ನಾಡಿನ ಅನ್ನದಾತರಿಗೆ ದಾರಿ ದೀಪವಾಗಿದ್ದಾರೆ.

2006ರಲ್ಲಿ ದಾವಣಗೆರೆಯಲ್ಲಿ ಆರಂಭಿಸಿದ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮೂಲಕ ರಾಜ್ಯದ ಹಲವಾರು ಜಿಲ್ಲಾಗಳ ರೈತರಿಗೆ ನಿತ್ಯವು ಸಲಹೆ ಸೂಚನೆ ನೀಡಿ ಕೃಷಿಕರ ಬದುಕಿಗೆ ಚೈತನ್ಯ ತುಂಬಲಾಗುತ್ತಿದೆ. 2002 ರಲ್ಲಿ ವಿಶ್ವಬ್ಯಾಂಕ್ ಸಹಯೋಗದಲ್ಲಿ ಹಾವೇರಿ ಜಿಲ್ಲಾಯ ಹಾನಗಲ್ ನಲ್ಲಿ 40 ಕೆರೆಗಳಿಗೆ 2015 ರಿಂದ ಚಿತ್ರದುರ್ಗ ತಾಲೂಕಿನ ಭರಮಸಾಗರ, ದಾವಣಗೆರೆ ಜಿಲ್ಲಾಯ ಜಗಳೂರು ತಾಲ್ಲೂಕಿನ ನೂರಾರು ಕೆರೆಗಳ ಕಾಯಕಲ್ಪ ನೀಡಿ ಕೆರೆ ಪಾತ್ರದ ಜನರ ಬದುಕಿಗೆ ಆಸರೆಯಾಗಿದ್ದು ನಿತ್ಯ ಸ್ಮರಣೀಯ ಕಾಯಕವಾಗಿದೆ.

ಅತ್ಯಂತ ಕ್ರಿಯಾಶೀಲವಾಗಿ ಸದೃಢ ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡು ಕಾರ್ಯನಿರ್ವಸಿಸುತ್ತಿರುವ ತರಳಬಾಳು ಕೃಷಿ ವಿಜ್ಞಾನ ಕೇಂದ್ರವು ರೈತರ ಬದುಕಿನ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುವ ಮೂಲಕ 2019 ರಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರವಾಗಿದೆ.

ಗುರುವಂದನೆ : ನೊಂದವರ ಪಾಲಿನ ಆಸರೆಯ ಕಡಲಾಗಿ, ಸಮಾಜಬಾಂಧವರ ಸಮಸ್ಯೆಗಳನ್ನು ಆಲಿಸಿ ಸಾವಿರಾರು ಅಹವಾಲುಗಳಿಗೆ ಸಂವಿಧಾನವೇ ಶ್ಲಾಘಿಸುವಂತೆ ಸೂಕ್ತ ನ್ಯಾಯ ನಿರ್ಣಯ ದಯಪಾಲಿಸಿ, ನ್ಯಾಯಾಲಯಗಳ ನ್ಯಾಯಾಧೀಶರೂ ಪೀಠದ ನ್ಯಾಯ ತೀರ್ಮಾನವನ್ನು ಪ್ರಶಂಸಿಸಿ, ಅಂತರಾಷ್ಟ್ರೀಯ ಮನ್ನಣೆಯ ಸದ್ದರ್ಮನ್ಯಾಯ ಪೀಠದ ಧರ್ಮ ದಾಸೋಹಿ, ಶ್ರೀ ತರಳಬಾಳು ಜಗದ್ಗುರು 1108 ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಜನ್ಮದಿನೋತ್ಸವದ ತನ್ನಿಮಿತ್ತ ಭಕ್ತಿಪೂರ್ವಕ ಪ್ರಣಾಮಗಳು.

ಕೃಷ್ಣ ಮೇಲ್ದಂಡೆ ಅಣೆಕಟ್ಟಿನ ಯೋಜನೆಯಲ್ಲಿ ನಿರ್ಮಾಣವಾಗುತ್ತಿದ್ದ ನಾರಾಯಣಪುರ ಅಣೆಕಟ್ಟು ಪೂರ್ಣಗೊಂಡರೆ, ಎರಡು ನದಿಗಳ ಸಂಗಮ ಸ್ಥಳದಲ್ಲಿರುವ ಮಂಟಪ, ಕೃಷ್ಣೆಯ ದಡದ ಮೇಲಿರುವ ಸಂಗಮೇಶ್ವರ ದೇವಾಲಯ, ಅದರ ಎದುರು ಅನತಿದೂರದಲ್ಲಿರುವ ನೀಲಮ್ಮನ ಗುಡಿ; ಈ ಎಲ್ಲಾ ಸ್ಮಾರಕಗಳು ಜಲಾಶಯದ ಗರ್ಭದಲ್ಲಿ ಅಡಗಿಹೋಗುವ ಸಂಭವವಿದ್ದಾಗ, ಜಲಾಶಯದ ಅಗತ್ಯ ಮತ್ತು ಅನುಕೂಲಗಳನ್ನು ಒಪ್ಪಿಕೊಂಡರು.

1980ರಲ್ಲಿ ಕೂಡಲಸಂಗಮದ ಪುನರುಜ್ಜೀವನಕ್ಕೆ ಅಂದಿನ ರಾಷ್ಟ್ರಪತಿಯವರಿಂದ ಹಿಡಿದು ಮುಖ್ಯಮಂತ್ರಿಗಳವರೆಗೆ ಯೋಜನೆಯ ಲೋಪಗಳನ್ನು ಅಮೂಲಾಗ್ರವಾಗಿ ಮನವರಿಕೆ ಮಾಡಿ ಕೂಡಲ ಸಂಗಮದ ಇಂದಿನ ಉನ್ನತ ಸ್ಥಿತಿಗೆ ಹಗಲಿರುಳು ಶ್ರಮ ಪಟ್ಟುವರು ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು.

ಬಸವಣ್ಣನವರ ವಚನಗಳನ್ನು ಅಂತರ್ಜಾಲದಲ್ಲಿ ಅಳವಡಿಸುವ ಮೂಲಕ ಬಸವಣ್ಣನವರನ್ನು ನಿಜಾರ್ಥದಲ್ಲಿ ವಿಶ್ವಗುರುವಾಗಿಸಿದ ಕರ್ಮಯೋಗಿಗಳು. ಇಂತಹ ಅಪರೂಪದ ಪರಮಪೂಜನೀಯ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರಿಗೆ ಜನ್ಮದಿನೋತ್ಸವದ ಭಕ್ತಿ ಪೂರ್ವಕ ಪ್ರಣಾಮಗಳು.

Facebook Comments