ಇಂಗ್ಲೆಂಡ್‍ನ ಟಾಟಾ ಸ್ಟೀಲ್ ಘಟಕದಲ್ಲಿ ಸ್ಫೋಟ: ಹಲವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಲಂಡನ್, ಏ.26-ಇಂಗ್ಲೆಂಡ್‍ನ ಫೋರ್ಟ್ ಟಾಲ್‍ಬೋಟ್‍ನಲ್ಲಿರುವ ಬೃಹತ್ ಟಾಟಾ ಸ್ಟೀಲ್‍ವಕ್ರ್ಸ್ ಘಟಕದಲ್ಲಿ ಮೂರು ಸ್ಫೋಟಗಳು ಸಂಭವಿಸಿ ಹಲವು ಮಂದಿ ಗಾಯಗೊಂಡಿದ್ದಾರೆ.

ಲಂಡನ್ ಸಮೀಪದ ವೇಲ್ಸ್‍ನ ಫೋರ್ಟ್ ಟಾಲ್‍ಬೋಟ್‍ನಲ್ಲಿ ಸ್ಥಳೀಯ ಕಾಲಾಮಾನ 3.35ರಲ್ಲಿ ಈ ಸ್ಫೋಟಗಳು ಸಂಭವಿಸಿತು ಎಂದು ಬಿಬಿಸಿ ವರದಿ ಮಾಡಿದೆ.

ಟಾಟಾ ಸ್ಟೀಲ್‍ವಕ್ರ್ಸ್ ಘಟಕದಲ್ಲಿ ಮೂರು ಸ್ಫೋಟಗಳು ಸಂಭವಿಸಿದವು. ಕೆಲವರು ಗಾಯಗೊಂಡಿದ್ಧಾರೆ. ಇದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ಮುಂದುವರಿಯುತ್ತಿದೆ ಎಂದು ಸೌತ್ ವೇಲ್ಸ್ ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ತಿಳಿಸಿದ್ಧಾರೆ.

ಸ್ಫೋಟದ ನಂತರ ಘಟಕಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಅಗ್ನಿಯನ್ನು ಶಮನಗೊಳಿಸಲಾಗಿದೆ. ಸಂತ್ರಸ್ತರಿಗೆ ರಕ್ಷಣಾ ಪರಿಹಾರ ಸೇವೆಗಳನ್ನು ಒದಗಿಸಲಾಗಿದೆ ಎಂದು ಟಾಟಾ ಸ್ಟೀಲ್‍ವಕ್ರ್ಸ್ ವಕ್ತಾರರು ಹೇಳಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ