ವಿಶ್ವದಾಖಲೆಗೆ ನಡೆಯುತ್ತೆ 8 ನಿಮಿಷದಲ್ಲಿ 55 ಡೋನಟ್’ಗಳನ್ನು ತಿನ್ನೋ ಸ್ಪರ್ಧೆ..!

ಈ ಸುದ್ದಿಯನ್ನು ಶೇರ್ ಮಾಡಿ

ds--2

ಅಮೆರಿಕ ವಿಶಿಷ್ಟ ಆಚರಣೆಗಳಿಗೆ ಹೆಸರುವಾಸಿ. ಪ್ರಸಿದ್ದ ಆಹಾರಗಳ ಹೆಸರಿನಲ್ಲೂ ಅಲ್ಲಿ ದಿನಾಚರಣೆ ಮತ್ತು ಸ್ಪರ್ಧೆಗಳು ನಡೆಯುತ್ತದೆ. ಉತ್ತರ ಅಮೆರಿಕದ ಅನೇಕರು ಪ್ರತಿ ವರ್ಷ ಜೂನ್-ಜುಲೈನಲ್ಲಿ ರಾಷ್ಟ್ರೀಯ ಡೋನಟ್ ದಿನ ಆಚರಿಸುತ್ತಾರೆ. ಏನಿದರ ವಿಶೇಷ ?  ಉತ್ತರ ಅಮೆರಿಕದಲ್ಲಿ ಪ್ರತಿವರ್ಷ ನಡೆಯುವ ನ್ಯಾಷನಲ್ ಡೋನಟ್ ಡೇ ಆಚರಣೆಗೆ ವಿಶೇಷ ಮಾನ್ಯತೆ ಇದೆ. ಒಂದೊಂದು ಭಾಗದಲ್ಲಿ ಒಂದೊಂದು ರೀತಿ ಇದನ್ನು ಆಚರಿಸಲಾಗುತ್ತದೆ.  ಹಾಲಿವುಡ್‍ನಲ್ಲಿ ಸ್ಪರ್ಧೆ ಮೂಲಕ ರಾಷ್ಟ್ರೀಯ ಡೋನಟ್ ದಿನವನ್ನು ಆಚರಿಸಲಾಯಿತು. ಟಿಸಿಎಲ್ ಚೀನಾ ಥಿಯೇಟರ್ ಹೊರಗೆ ಡೋನಟ್‍ಗಳನ್ನು ತಿನ್ನುವ ಸ್ಪರ್ಧೆ ಆಯೋಜಿಸಲಾಗಿತ್ತು. 8 ನಿಮಿಷಗಳಲ್ಲಿ 55 ಡೋನಟ್‍ಗಳನ್ನು ತಿನ್ನುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಬೇಕೆಂಬುದು ಸ್ಪರ್ಧೆಯ ಗುರಿಯಾಗಿತ್ತು. ಜೋಯಿ ಚೆಸ್ಟ್‍ನಟ್ ಕಳೆದ ವರ್ಷ ದಾಖಲೆ ನಿರ್ಮಿಸಿದ್ದ.

ಈ ವರ್ಷದ ಸ್ಪರ್ಧೆಗೆ ಆತ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಪ್ರಬಲ ಸ್ಪರ್ಧಿಯಾಗಿದ್ದ ಮ್ಯಾಥ್ಯೂ ಸ್ಟೋನಿ ದಾಖಲೆ ಮುರಿಯಲು ಯತ್ನಿಸಿದ. ಆದರೆ ಅದು ಸಾಧ್ಯವಾಗಲಿಲ್ಲ. 48 ಡೋನಟ್‍ಗಳನ್ನು ಭಕ್ಷಿಸಿ ಬಹುಮಾನ ಗೆದ್ದು ಆತ ಸಮಾಧಾನ ಪಟ್ಟುಕೊಳ್ಳಬೇಕಾಯಿತು.  ಕೆಲವು ಸ್ಪರ್ಧಿಗಳು ಗಬಗಬನೆ ಡೋನಟ್‍ಗಳನ್ನು ಮುಕ್ಕಿ ತೊಂದರೆಗೆ ಸಿಲುಕಿದರು. ಮುಂದಿನ ವರ್ಷದ ತನಕ ಡೋನಟ್‍ಗಳ ತಂಟೆಗೆ ಹೋಗದ ಪರಿಸ್ಥಿತಿಯನ್ನು ಅನುಭವಿಸಿದರು.

ds

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin