ಕೆಎಎಸ್ ಬರೆದು ತಹಶೀಲ್ದಾರ್ ಆದ ಶಿಕ್ಷಕಿ

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಜ.4-ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದ ಪೂರ್ಣಿಮಾ ಅವರು ಮೊದಲ ಯತ್ನದಲ್ಲಿಯೇ ಕೆಎಎಸ್‍ನಲ್ಲಿ ಉತ್ತೀರ್ಣರಾಗಿ ಈಗ ಅಧಿಕಾರಿಯಾಗಿದ್ದಾರೆ. ಅರಕಲಗೂಡು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಂಕರಾಚಾರಿ ಮತ್ತು ಸರೋಜಮ್ಮನವರ ಪುತ್ರಿ ಹಾಗೂ ರಕ್ಷಣಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಮೇಶ್ ರವರ ಪತ್ನಿ ಇವರಾಗಿದ್ದು, ತಂದೆಯವರ ಒತ್ತಾಸೆಯಂತೆ ಕೆಎಎಸ್ ಪೂರ್ಣಗೊಳಿಸಿದ್ದಾರೆ.

ಪಿಯುಸಿ ಮುಗಿದ ನಂತರ ಮದುವೆಯಾದ ಪೂರ್ಣಿಮಾ ರವರು, ನಂತರದಲ್ಲಿಯೂ ಓದಿನ ಬಗ್ಗೆ ಹೆಚ್ಚಿನ ಆಸಕ್ತಿ ಇದ್ದ ಕಾರಣ ಪತಿ ರಮೇಶ್ ಅವರು ಡಿ.ಇಡಿ ಓದಿಸಿ ಮಾ.ಪ್ರಾ.ಶಾಲೆ, ದೊಡ್ಡ ಮಗ್ಗೆಯಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.  ಸತತ 12 ವರ್ಷಗಳಿಂದ ಸೇವೆಯಲ್ಲಿ ತಮ್ಮ ಶಾಲೆಯ ಮಕ್ಕಳಿಗೆ ಕಲಿಕೆಗೆ ಒತ್ತು ನೀಡುತ್ತಿದ್ದರು. ಇವರು 2017 ರ ಗೆಜೆಟೆಡ್ ಅಧಿಕಾರಿಯಾಗಿ (ತಹಸೀಲ್ದಾರ್ ಗ್ರೇಡ್-2) ಆಗಿ ನೇಮಕಗೊಂಡಿದ್ದಾರೆ.

Facebook Comments